Monday, December 23, 2024

ಸೆಲೆಬ್ರೆಟಿಗಳ ಭೇಟಿಗೆ ಟೈಮ್ ಇದೆ, ಶ್ರೀಗಳ ದರ್ಶನಕ್ಕೆ ಟೈಮೇ ಇಲ್ಲ : ಮೋದಿ ವಿರುದ್ಧ ಪರಂ ಗರಂ

ತುಮಕೂರು ಶ್ರೀ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನಕ್ಕೆ ಬಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಗರಂ ಆಗಿದ್ದಾರೆ.
”ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲೆಬ್ರೆಟಿಗಳ ಮದುವೆಗೆ ಹೋಗೋಕೆ, ಚಿತ್ರ ನಟರನ್ನು ಭೇಟಿ ಮಾಡೋಕೆ ಸಮಯ ಇರುತ್ತೆ. ಆದರೆ, ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಬರಲು ಸಮಯವಿಲ್ಲ” ಅಂತ ಟ್ವೀಟ್ ಮೂಲಕ ಟೀಕಿಸಿದ್ದಾರೆ. ಅದೇರೀತಿ ಶ್ರೀಗಳಿಗೆ ಭಾರತರತ್ನ ನೀಡಬೇಕು ಅಂತ ಕೇಂದ್ರಸರ್ಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES