Thursday, May 30, 2024

ಕೈ ಕೈ ಮಿಲಾಯಿಸಿದ ‘ಕೈ’ಶಾಸಕರು – ಶಾಸಕ ಆನಂದ್​ ಸಿಂಗ್ ಆಸ್ಪತ್ರೆಗೆ ದಾಖಲು

ರಾಮನಗರ : ಕಾಂಗ್ರೆಸ್​​ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಅಸಮಾಧಾನ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಬಂದಿದೆ.
ಈಗಲ್​ಟನ್​ ರೆಸಾರ್ಟ್​​ನಲ್ಲಿ ವಿಜಯ ನಗರ ಶಾಸಕ ಆನಂದ್​ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಅಲ್ಲಗಳೆದಿರೋ ಕಾಂಗ್ರೆಸ್​ ಶಾಸಕರ ನಡುವೆ ಮಾರಾಮಾರಿ ಏನೂ ನಡೆದಿಲ್ಲ ಅಂತ ಹೇಳುತ್ತಿದೆ.
ಆದರೆ, ಗಣೇಶ್ ಮತ್ತು ಆನಂದ್​ ಸಿಂಗ್ ಅವರ ನಡುವೆ ಮನಸ್ತಾಪ ಇಂದು-ನಿನ್ನೆಯದಲ್ಲ. ಇಬ್ಬರ ನಡುವೆ ಈ ಹಿಂದೆಯೂ ಸಾಕಷ್ಟು ಬಾರಿ ವಾಗ್ವಾದ ನಡೆದಿದೆ. ವಿಧಾನಸೌಧದಲ್ಲಿ ನಡೆದ ಸಭೆಯಲ್ಲೂ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ನಿನ್ನೆ ಈಗಲ್​ ಟನ್​ ರೆಸಾರ್ಟ್​ನಲ್ಲಿ ಪಾರ್ಟಿವೇಳೆ ಅಸಮಾಧಾನ ಸ್ಫೋಟಗೊಂಡಿದ್ದು, ಗಣೇಶ್ ಆನಂದ್​ ಸಿಂಗ್ ಅವರಿಗೆ ಬಾಟಲಿಯಲ್ಲಿ ಹೊಡೆದಿದ್ದಾರೆ. ಗಣೇಶ್ ಬಿಜೆಪಿ ಸೇರೋ ಕುರಿತು ಕಾಂಗ್ರೆಸ್​ ನಾಯಕರಿಗೆ ಆನಂದ್​ ಸಿಂಗ್ ಮಾಹಿತಿ ನೀಡಿದ್ದು ಇಬ್ಬರ ನಡುವಿನ ಜಗಳಕ್ಕೆ ಪ್ರಮುಖ ಕಾರಣ ಅಂತ ಹೇಳಲಾಗಿದೆ.
ಸದ್ಯ ಆನಂದ್​ ಸಿಂಗ್​ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಡೆದಾಟದ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಚಿವ ಡಿ.ಕೆ ಶಿವಕುಮಾರ್​, ‘ ಇಬ್ಬರು ಶಾಸಕರ ನಡುವೆ ಹೊಡೆದಾಟವೇನೂ ಆಗಿಲ್ಲ. ನಡೆದಿದ್ದು ಮಾತಿನ ಚಕಮಕಿಯಷ್ಟೇ. ಇಬ್ಬರ ನಡುವೆ ಸಂಧಾನ ನಡೆಸಿದ್ದೇನೆ” ಅಂತ ಹೇಳಿದ್ದಾರೆ. ಆದರೆ, ಮಾತಿನಚಕಿ ಮಾತ್ರ ಆಗಿದ್ದರೆ ಆನಂದ್​ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದೇಕೆ?

RELATED ARTICLES

Related Articles

TRENDING ARTICLES