Thursday, May 30, 2024

ರೆಸಾರ್ಟ್ ಪಾಲಿಟಿಕ್ಸ್​ ಮಾಡ್ತಿಲ್ಲ, ಸಭೆ ಮಾಡ್ತಿದ್ದೀವಿ ಅಂದ್ರು ಕೈ ಶಾಸಕರು..!

ಕಾಂಗ್ರೆಸ್​ ರೆಸಾರ್ಟ್​ ರಾಜಕಾರಣ ಮಾಡ್ತಿದೆ ಅನ್ನೋದಕ್ಕೆ ಸಚಿವ ರಾಜಶೇಖರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ರೆಸಾರ್ಟ್​ನಲ್ಲಿ ಯಾರನ್ನೂ ಕೂಡಿಹಾಕಿಲ್ಲ. ಸಭೆ ಇದೆ ಅಂತ ಹೇಳಿದ್ರು ಅದಕ್ಕೆ ಬಂದಿದ್ದೇನೆ. ನಿನ್ನೆ ಸಿಎಲ್​ಪಿ ಸಭೆ ಬಳಿಕ ರೆಸಾರ್ಟ್​​ಗೆ ಹೋಗೋಣ ಅಂದ್ರು ಅದಕ್ಕೆ ಬಂದಿದ್ದೇವೆ ಅಷ್ಟೇ. ಇಷ್ಟು ದಿನ ಬಿಜೆಪಿ ಹೋಗದವರು ಈಗ ಹೋಗ್ತಾರಾ ? ಎಂದು ಪ್ರಶ್ನಿಸೋ ಮೂಲಕ ಸಚಿವ ರಾಜಶೇಖರ್ ಪಾಟೀಲ್ ರೆಸಾರ್ಟ್​ ರಾಜಕಾರಣ ಮಾಡ್ತಿಲ್ಲ ಅಂತ ಹೇಳಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಯು.ಟಿ.ಖಾದರ್ “ನಮ್ಮ ಎಲ್ಲಾ ಶಾಸಕರು ಒಂದೆಡೆ ಸೇರಿದ್ದೀವಿ ಅಷ್ಟೇ. ರೆಸಾರ್ಟ್​ ರಾಜಕಾರಣ ಮಾಡಲು ಸೇರಿಲ್ಲ. ನಾವು ಹಬ್ಬ ಬಿಟ್ಟು 8-10 ದಿನ ಎಲ್ಲೂ ಹೋಗಿಲ್ಲ. ಎಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೇರಿದ್ದೀವಿ. ನಾವು ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಿಲ್ಲ” ಅಂತ ಹೇಳಿದ್ದಾರೆ.

“ಈಗಲ್ಟನ್​ ರೆಸಾರ್ಟ್‌ನಲ್ಲಿ ರಾತ್ರಿ ಯಾವುದೇ ಚರ್ಚೆ ನಡೆದಿಲ್ಲ. ಮಧ್ಯಾಹ್ನ ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯುತ್ತೆ. ನಾವೆಲ್ಲರೂ ಒಗ್ಗಟ್ಟಾಗಿ‌ ಇದ್ದೇವೆ. ಒಂದಿಬ್ಬರು ಶಾಸಕರು ಬಂದಿಲ್ಲ. 7 ತಿಂಗಳಿಂದ ಕೆಲಸಗಳು ಆಗಿಲ್ಲ ಎಂಬ ಅಸಮಾಧಾನ ಶಾಸಕರಿಗಿದೆ. ಈ  ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ” ಅಂತ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ನಂಜೇಗೌಡ ಹೇಳಿದ್ದಾರೆ.  

ರಾಮನಗರದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿ, ಎಲ್ಲ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ. ಇಬ್ಬರು ಮಾತ್ರ ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಿಜೆಪಿಯವರಿಗೆ ಹೆದರಿಕೊಂಡು ರೆಸಾರ್ಟ್​ಗೆ ಬಂದಿಲ್ಲ. ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸಂಪರ್ಕಕ್ಕೆ ಸಿಕ್ಕಿಲ್ಲ. ನಾಗೇಂದ್ರ, ಉಮೇಶ್ ಜಾಧವ್ ನಾಯಕರ ಜೊತೆ ಮಾತಾಡಿದ್ದಾರೆ ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES