ಸದ್ಯ ಮೈದಾನದಿಂದ ಹೊರಗುಳಿದು ವಿಶ್ರಾಂತಿಯಲ್ಲಿರುವ ಮಾಜಿ ನಾಯಕ ಎಮ್ ಎಸ್ ಧೋನಿ ಮಗಳು ಝೀವಾ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನ ಬೀಚ್‌ವೊಂದಕ್ಕೆ ತೆರಳಿದ್ದ ಧೋನಿ ಮಗಳೊಂದಿಗೆ ಮರಳಿನ ಆಟವಾಡಿದ್ದಾರೆ. ಆಟವಾಡುತ್ತಿರುವ ವಿಡಿಯೋವನ್ನ ಧೋನಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ತಾಯಿ ಮಕ್ಕಳ ಸಂಬಂಧ ಅದು ಅತಿ ಪವಿತ್ರ ಸಂಬಂಧ. ಆದ್ರೆ ತಂದೆ ಮಕ್ಕಳ ಸಂಬಂಧ ಅನ್ನೋದು ಅದೊಂದು ಪ್ರೀತಿಯ ಭಾವಪೂರ್ಣ ಸಂಬಂಧ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ಅದೇನೋ ಪ್ರೀತಿ, ಅದೇನೋ ಸಲಿಗೆ, ಮಗಳ ಪಾಲಿಗೆ ಪಾಲಿಗೆ ಅಪ್ಪನೇ ಹೀರೋ.. ಭಾರತದ ಹೆಮ್ಮೆಯ ಕ್ರಿಕೆಟಿಗ ಎಂಎಸ್ ಧೋನಿಗಂತೂ ಮಗಳೇ ಪ್ರಪಂಚ, ಮಗಳು ಅಂದ್ರೆ ಧೋನಿಗೆ ಜೀವಾ.
ಬಿಡುವು ಸಿಕ್ಕ ಸಮಯದಲ್ಲೆಲ್ಲಾ ಮಾಹಿ ಮಗಳ ಜೊತೆ ಮಗುವಾಗಿ ಬಿಡ್ತಾರೆ.. ಮಗುವಿನಂತೆ ಮಗಳ ಜೊತೆ ಆಟ ಆಡ್ತಾರೆ. ಅವರ ಈ ಪ್ರೀತಿಯ ಬಂಧವನ್ನು ನೋಡೋದೆ ಚೆಂದ.. ಅವರು ಮಗಳ ಜೊತೆ ಆಟ ಆಡೋ ವಿಡಿಯೋಗಳು ಆಗಾಗಾ ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗ್ತಾನೇ ಇರುತ್ತೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಸದ್ಯಕ್ಕೆ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಧೋನಿ ಕುಟುಂಬ ಸಮೇತರಾಗಿ ಚೆನ್ನೈ ಬೀಚ್‌ಗೆ ತೆರಳಿದ್ದರು. ಈ ವೇಳೆ ಝೀವಾಳೊಂದಿಗೆ ಮರಳಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದರು. ಈ ದೃಶ್ಯವನ್ನು ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
https://www.instagram.com/p/BsAuy7rFoHi/