Friday, July 19, 2024

ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು ; ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು ರಹೀಂ ಖಾನ್!

ಬೆಂಗಳೂರು : ಅಂತೂ ಇಂತೂ ಮೈತ್ರಿ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 8 ಮಂದಿ ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ್ರು. ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಸತೀಶ್ ಜಾರಕಿಹೊಳಿ, ಸಿ.ಎಸ್.ಶಿವಳ್ಳಿ, ಪಿ.ಟಿ.ಪರಮೇಶ್ವರ್​ ನಾಯ್ಕ್, ಇ.ತುಕಾರಾಂ,ರಹೀಂ ಖಾನ್, ಎಂಟಿಬಿ ನಾಗರಾಜ್​ ಅವರು ಸಂಪುಟ ಸೇರಿದ ನೂತನ ಸಚಿವರು.
ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಇ.ತುಕಾರಾಂ ದೇವರ ಹೆಸರಲ್ಲಿ, ಸತೀಶ್ ಜಾರಕಿಹೊಳಿ ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ, ಸಿ.ಎಸ್.ಶಿವಳ್ಳಿ ಈಶ್ವರನ ಹೆಸರಲ್ಲಿ, ಪಿ.ಟಿ.ಪರಮೇಶ್ವರ್​ ನಾಯ್ಕ್ ತುಳಜಾಭವಾನಿ ಹೆಸರಲ್ಲಿ, ಎಂಟಿಬಿ ನಾಗರಾಜ್​, ಮಂಜುನಾಥ ಸ್ವಾಮಿ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ರು. ರಹೀಂ ಖಾನ್ ಅಲ್ಲಾ ಹೆಸರಲ್ಲಿ ಇಂಗ್ಲಿಷ್​ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.

RELATED ARTICLES

Related Articles

TRENDING ARTICLES