Friday, April 12, 2024

ಭರ್ಜರಿ ಗೆಲುವಿನ ನಂತರ ಶಿಮ್ಲಾದಲ್ಲಿ ರಜೆ ಆನಂದಿಸ್ತಿದ್ದಾರೆ ರಾಹುಲ್​ಗಾಂಧಿ

ಶಿಮ್ಲಾ: ಪಂಚ ರಾಜ್ಯ ಚುನಾವಣೆಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದ ರಾಹುಲ್ ಗಾಂಧಿ ಈಗ ಶಿಮ್ಲಾದಲ್ಲಿ ಸಹೋದರಿ ಜೊತೆ ರಜೆಯನ್ನು ಅನುಭವಿಸುತ್ತಿದ್ದಾರೆ.

ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ಅವರ ಮಕ್ಕಳೊಂದಿಗೆ ರಾಹುಲ್ ಗಾಂಧಿ ಶಿಮ್ಲಾದಲ್ಲಿ ರಜೆಯ ಸಮಯವನ್ನು ಆನಂದಿಸಿದ್ರು. ದಾರಿ ಮಧ್ಯೆ ಸೋಲನ್​ ಜಿಲ್ಲೆಯ ಡಾಬಾವೊಂದರಲ್ಲಿ ಒಂದಷ್ಟು ಸಮಯ ಕಳೆದ ಕಾಂಗ್ರೆಸ್ ಅಧ್ಯಕ್ಷ ಮ್ಯಾಗಿ ನೂಡಲ್ಸ್​ ಮತ್ತು ಟೀ ಸವಿದಿದ್ದಾರೆ. ರಾಹುಲ್​ಗಾಂಧಿ ಡಾಬಾ ಬಳಿ ಬಂದಿರುವುದನ್ನು ಅರಿತ ಕೂಡಲೇ ಮಹಿಳೆಯರೂ ಸೇರಿದಂತೆ ಜನ ಕಾಂಗ್ರೆಸ್ ಅಧ್ಯಕ್ಷರನ್ನು ನೋಡೋಕೆ ಬಂದಿದ್ರು. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ ಗೆಲುವಿಗೆ ಜನ ಶುಭಾಶಯ ತಿಳಿಸಿದ್ರು.

ತಾನು ಖಾಸಗಿ ಕೆಲಸಕ್ಕಾಗಿ ಬಂದಿದ್ದೇನೆ ಅಂತ ಹೇಳಿರೋ ರಾಹುಲ್​ಗಾಂಧಿ ಛರಬ್ರಾ ಹೊಟೇಲ್​ನಲ್ಲಿ ಉಳಿದುಕೊಂಡಿದ್ದಾರೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಖ್ವಿಂದರ್​ ಈ ಕುರಿತು ಪ್ರತಿಕ್ರಿಯಿಸಿದ್ದು, ರಾಹುಲ್​ಗಾಂಧಿ ಆಗಮನದ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್​ಗಡ್​ನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜಯಭೇರಿ ಬಾರಿಸಿತ್ತು.

RELATED ARTICLES

Related Articles

TRENDING ARTICLES