Saturday, September 14, 2024

ಕೊನೆಗೂ ಸೇಲಾದ ಯುವಿ..!

ಯುವರಾಜ್ ಸಿಂಗ್ , ಒಂದು ಕಾಲದಲ್ಲಿ ಈ ಹೆಸ್ರು ಕೇಳಿದ್ರೆ ವಿಶ್ವ ಕ್ರಿಕೆಟ್ ನ ಸ್ಟಾರ್ ಬೌಲರ್ ಗಳೇ ನಡುಗುತ್ತಿದ್ರು. ಬರೀ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ ಬೌಲಿಂಗ್, ಫೀಲ್ಡಿಂಗ್ ನಲ್ಲಿ ಯುವಿ ಖದರ್ರೇ ಬೇರೆ ಇತ್ತು. ಯುವಿ ವಿಶ್ವಕ್ರಿಕೆಟ್ ಕಂಡ ಅದ್ಭುತ ಆಲ್​ರೌಂಡರ್.
ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಅದನ್ನು ತೋರಿಸಿಕೊಳ್ಳದೆ, 2011 ರ ವರ್ಲ್ಡ್​ಕಪ್ ನಲ್ಲಿ ಯುವಿ ನೀಡಿದ ಆಲ್​ರೌಂಡ್ ಪರ್ಫಾರ್ಮೆನ್ಸ್ ಅನ್ನು ಯಾರೂ ಕೂಡ ಮರೆಯಲು ಸಾಧ್ಯವೇ ಇಲ್ಲ. ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ತಂದುಕೊಟ್ಟವರು ಈ ಯುವರಾಜ್ ಸಿಂಗ್.
ವರ್ಲ್ಡ್ ಕಪ್ ಬಳಿಕ ‘ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ಮತ್ತೆ ಇಂಟರ್ ನ್ಯಾಷನಲ್ ಕ್ರಿಕೆಟ್​ಗೆ ಕಮ್​ ಬ್ಯಾಕ್ ಆಗಿದ್ದ ಯುವಿ, ತನ್ನ ಹಳೇ ಫಾರ್ಮ್ ಅನ್ನು ಉಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲ.
ಇಂದು ಟೀಮ್ ಇಂಡಿಯಾದಿಂದ ಅವಕಾಶ ವಂಚಿತರಾಗಿರೋ ಯುವಿ, ಐಪಿಎಲ್​ ನಲ್ಲೂ ಡಿಮ್ಯಾಂಡ್ ಕಳೆದುಕೊಂಡು ಬಿಟ್ಟಿದ್ದಾರೆ. 2014ರಲ್ಲಿ 14 ಕೋಟಿ ರೂ, 2015ರಲ್ಲಿ 16 ಕೋಟಿರೂಗಳಿಗೆ ದಾಖಲೆ ಬೆಲೆಗೆ ಸೇಲಾಗಿದ್ದ ಯುವಿ ಈ ಬಾರಿ ಹರಾಜಿನಲ್ಲಿ ಮೊದಲ ಸುತ್ತಿನಲ್ಲಿ ಅನ್​ಸೋಲ್ಡ್ ಆಗಿಬಿಟ್ಟಿದ್ರು..! ಸ್ಟಾರ್ ಆಟಗಾರ ಯುವಿಯನ್ನು ಕೊಳ್ಳಲು ಯಾವ ಫ್ರಾಂಚೈಸಿಯೂ ಅಷ್ಟೊಂದು ಒಲವು ತೋರಲೇ ಇಲ್ಲ..! ಎರಡನೇ ಸುತ್ತಿನಲ್ಲಿ ಮೂಲ ಬೆಲೆ 1 ಕೋಟಿರೂಗೆ ಯುವಿ ಮುಂಬೈ ಇಂಡಿಯನ್ಸ್ ಪಾಲಾದರು. ಅಂತು-ಇಂತು ಕೊನೆಗೂ ಯುವಿ ಸೇಲಾದರಲ್ಲಾ..? ಈ ಬಾರಿ ಐಪಿಎಲ್​ ನಲ್ಲಿ ಆಡ್ತಿದ್ದಾರಲ್ಲಾ..? ಅನ್ನೋದೊಂದೇ ಅಭಿಮಾನಿಗಳಿಗೆ ಖುಷಿ ವಿಚಾರ. ಯುವಿ ಮತ್ತೆ ಘರ್ಜಿಸಲಿ, ಟೀಮ್ ಇಂಡಿಯಾಕ್ಕೆ ವಾಪಾಸ್ಸಾಗಲಿ ಎಂದು ಹಾರೈಸೋಣ.

RELATED ARTICLES

Related Articles

TRENDING ARTICLES