Saturday, November 16, 2024

ಐಪಿಎಲ್ ಹರಾಜು : ಯಾರ ಮೂಲ ಬೆಲೆ ಎಷ್ಟು?

ಡಿಸೆಂಬರ್ 18ರಂದು ನಡೆಯಲಿರೋ ಹರಾಜಿಗೆ ಫ್ರಾಂಚೈಸಿಗಳ ಲೆಕ್ಕಾಚಾರ ಆರಂಭವಾಗಿದೆ. ಯಾವ ಆಟಗಾರನ್ನ ಖರೀದಿಸಬೇಕು? ಎಷ್ಟು ಹಣಕ್ಕೆ ಯಾವ ಆಟಗಾರ? ಯುವ ಪ್ರತಿಭೆಗಳಿಗೆ ಮಣೆ ಹಾಕ್ಬೇಕಾ? ಬೇಡ್ವಾ? ಮುಂತಾದ ಪ್ರಶ್ನೆಗಳು ಸಧ್ಯ ಎಲ್ಲಾ ತಂಡಗಳ ಮ್ಯಾನೆಜ್​ಮೆಂಟ್​ ವಲಯದಲ್ಲಿ ಸುತ್ತುತ್ತಾ ಇರೋ ಪ್ರಶ್ನೆಗಳು. ಹರಾಜಿಗೆ ರೆಡಿಯಾಗಿರೋ ಎಲ್ಲಾ ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರನ್ನ ಖರೀದಿಸಬೇಕಿದೆ.
ಕಳೆದ ಬಾರಿ 11.5 ಕೋಟಿಗೆ ಸೇಲಾಗಿ ದಾಖಲೆ ಬರೆದಿದ್ದ ಜಯದೇವ್​ ಉನಾದ್ಕತ್​ ಗೆ ಈ ಬಾರಿ 1.5 ಕೋಟಿ ಮೂಲ ಬೆಲೆ ನಿಗಧಿಪಡಿಸಲಾಗಿದ್ರೆ. 2 ಕೋಟಿ ಬೇಸ್​​ಪ್ರೈಸ್​​ನಲ್ಲಿ 9 ಆಟಗಾರರು ಹರಾಜಿಗಿದ್ದಾರೆ. ಹಾಗಾದ್ರೆ, ಈ ಬಾರಿಯ ಹರಾಜಿನಲ್ಲಿ ಯಾವ ಆಟಗಾರನಿಗೆ ಎಷ್ಟು ಮೂಲಬೆಲೆ ನಿಗಧಿಪಡಿಸಲಾಗಿದೆ? ಆ ಬಗೆಗಿನ ಡಿಟೇಲ್ಸ್​​ ಇಲ್ಲಿದೆ.
2 ಕೋಟಿ ಮೂಲಬೆಲೆಯಲ್ಲಿ ಒಟ್ಟು 9 ಆಟಗಾರರು ಹರಾಜಿಗೆ ಲಭ್ಯರಿದ್ದಾರೆ. ಆದ್ರೆ ಪಟ್ಟಿಯಲ್ಲಿರುವ ಎಲ್ಲಾ ಆಟಗಾರರು ವಿದೇಶಿಗರು.
ಹರಾಜಿನಲ್ಲಿರುವ 2 ಕೋಟಿ ಮೂಲ ಬೆಲೆಯ ಆಟಗಾರರು
ಪ್ಲೇಯರ್​                                        ದೇಶ
ಬ್ರೇಂಡನ್​ ಮೆಕಲಮ್​                          ನ್ಯೂಜಿಲೆಂಡ್​
ಕ್ರೀಸ್​ ವೋಕ್ಸ್​                                 ಇಂಗ್ಲೆಂಡ್​
ಲಸಿತ್​ ಮಲಿಂಗಾ                               ಶ್ರೀಲಂಕಾ
ಕಾಲಿನ್​ ಇಂಗ್ರಾಮ್​                            ಸೌತ್​ಆಫ್ರಿಕಾ
ಶಾನ್​ ಮಾರ್ಷ್​                                ಆಸ್ಟ್ರೇಲಿಯಾ
ಕೋರಿ ಆ್ಯಂಡರ್​ಸನ್​                           ನ್ಯೂಜಿಲೆಂಡ್​
ಏಂಜೆಲೊ ಮ್ಯಾಥ್ಯೂಸ್​                           ಶ್ರೀಲಂಕಾ
ಡಿ ಆರ್ಸಿ ಶಾರ್ಟ್                                 ಆಸ್ಟ್ರೇಲಿಯಾ
ಸ್ಯಾಮ್​ ಕುರಾನ್                                   ಇಂಗ್ಲೆಂಡ್​

ಇನ್ನು 1.5 ಕೋಟಿ ಮೂಲಬೆಲೆಯ ಪಟ್ಟಿಯಲ್ಲಿ ಒಟ್ಟು 10 ಆಟಗಾರರಿದ್ದಾರೆ. ಕಳೆದ ಬಾರಿ ದಾಖಲೆಯ ಮೊತ್ತಕ್ಕೆ ಬಿಕರಿಯಾಗಿದ್ದ ಜಯದೇವ್​ ಉನಾದ್ಕತ್​ ಈ ಪಟ್ಟಿಯಲ್ಲಿರುವ ಏಕೈಕ ಭಾರತದ ಆಟಗಾರನಾಗಿದ್ದಾರೆ.
ಹರಾಜಿನಲ್ಲಿರುವ 1.5 ಕೋಟಿ ಮೂಲ ಬೆಲೆಯ ಆಟಗಾರರು

ಪ್ಲೇಯರ್​                                        ದೇಶ
ಅಲೆಕ್ಸ್​ ಹೇಲ್ಸ್​​                                ಇಂಗ್ಲೆಂಡ್​
ಜಾನಿ ಬೈಸ್ಟ್ರೋ                              ಇಂಗ್ಲೆಂಡ್​
ಜಯದೇವ್​ ಉನಾದ್ಕತ್                      ಭಾರತ
ಮಾರ್ನೆ ಮೊರ್ಕೆಲ್​                           ಸೌತ್​ಆಫ್ರಿಕಾ
ಡೇಲ್ ಸ್ಟೈನ್                                ಸೌತ್​ಆಫ್ರಿಕಾ
ರಿಲೀ ರೋಸೋ                             ಸೌತ್​ಆಫ್ರಿಕಾ
ಲೂಕ್​ ವ್ರೈಟ್​                               ಇಂಗ್ಲೆಂಡ್​
ಜೇಮ್ಸ್​ ಫಾಲ್ಕನರ್                         ಆಸ್ಟ್ರೇಲಿಯಾ
ಅಲೆಕ್ಸ್​ ಕ್ಯಾರಿ                               ಆಸ್ಟ್ರೇಲಿಯಾ
ಲಿಯಾಮ್‌ ಡ್ವಾಸನ್‌​                        ಇಂಗ್ಲೆಂಡ್​
1 ಕೋಟಿ ಮೂಲ ಬೆಲೆಯ ಪಟ್ಟಿಯಲ್ಲಿ ಒಟ್ಟು 19 ಆಟಗಾರರು ಹರಾಜಿಗಿದ್ದಾರೆ. ಯುವರಾಜ್​ ಸಿಂಗ್​, ಅಕ್ಸರ್​​ ಪಟೇಲ್​, ವೃದ್ಧಿಮಾನ್​ ಸಹಾ, ಮೊಹ್ಮದ್​ ಶಮಿ 1 ಕೋಟಿ ಬೇಸ್​​​ ಪ್ರೈಸ್​​ನ ಪಟ್ಟಿಯಲ್ಲಿರುವ ಪ್ರಮುಖ ಭಾರತೀಯ ಆಟಗಾರರಿದ್ರೆ, ಮಾರ್ಟಿನ್​ ಗಪ್ಟಿಲ್, ಮೋಯಿಸ್ ಹೆನ್ರಿಕ್ಯೂಸ್, ಕ್ರಿಸ್​ ಜೋರ್ಡನ್​, ಆ್ಯಡಮ್​ ಜಂಪಾ, ಹಶೀಮ್​ ಆಮ್ಲಾ ಪ್ರಮುಖ ವಿದೇಶಿ ಕ್ರಿಕೆಟಿಗರಿದ್ದಾರೆ.
ಇನ್ನು, 75 ಲಕ್ಷ ಮೂಲ ಬೆಲೆಯ ಲಿಸ್ಟ್​ನಲ್ಲಿ 18 ಆಟಗಾರರಿದ್ದು, ಕಾರ್ಲಸ್ ಬ್ರಾಥ್‌ವೆಟ್, ನಮನ್​ ಓಜಾ, ಇಶಾಂತ್​ ಶರ್ಮಾ, ಜೇಸನ್​ ಹೋಲ್ಡರ್​, ಡೇರನ್​ ಬ್ರಾವೋ ಪಟ್ಟಿಯಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ. 50 ಲಕ್ಷ ಬೇಸ್​​ ಪ್ರೈಸ್​ನಲ್ಲಿ 62 ಆಟಗಾರರಿದ್ದು, 18 ಭಾರತೀಯ ಹಾಗೂ 44 ವಿದೇಶಿ ಆಟಗಾರರಿದ್ದಾರೆ. ಪಟ್ಟಿಯಲ್ಲಿ ವೆಸ್ಟ್​​ಇಂಡೀಸ್​​ನ ಶಿಮ್ರೊನ್​ ಹೆಟ್ಮೆಯರ್​, ಭಾರತದ ಚೇತೇಶ್ವರ್​ ಪೂಜಾರ, ಮನೋಜ್​ ತಿವಾರಿ ಹಾಗೂ ಹನುಮ ವಿಹಾರಿ ಸೇರಿದಂತೆ ಹಲವು ಆಟಗಾರರಿದ್ದಾರೆ.
ಕಣದಲ್ಲಿದ್ದಾರೆ 13 ಕನ್ನಡಿಗರು
ಐಪಿಎಲ್​ ಹರಾಜು ರೇಸ್​​ನಲ್ಲಿ ಒಟ್ಟು 13 ಕರ್ನಾಟಕದ ಆಟಗಾರಿದ್ದಾರೆ. ಈ ಪೈಕಿ ಆರ್​​ ವಿನಯ್​ ಕುಮಾರ್​, ಅಭಿಮನ್ಯು ಮಿಥುನ್ 50 ಲಕ್ಷ ಮೂಲ ಬೆಲೆಯಲ್ಲಿದ್ದಾರೆ. ಇನ್ನು ಪವನ್​ ದೇಶಪಾಂಡೆ,ಅನಿರುದ್ಧ್ ಜೋಶಿ,ಸೂರಜ್​ ಕಾಮತ್​, ರವಿ ಶರತ್​, ಕುಶಾಲ್​, ರೋನಿತ್​ ಮೋರೆ, ಪ್ರವೀಣ್ ದುಬೆ, ಜೆ ಸುಚಿತ್, ಕೆಸಿ ಕರಿಯಪ್ಪ, ದೇವ್​ದತ್ತ್ ಪಡಿಕ್ಕಲ್, ಆರ್​​ ಸಮರ್ಥ್​ 20 ಲಕ್ಷ ಬೇಸ್​​ ಪ್ರೈಸ್​ಗೆ ಹರಾಜಿನ ರೇಸ್​ನಲ್ಲಿದ್ದಾರೆ.​

RELATED ARTICLES

Related Articles

TRENDING ARTICLES