Thursday, May 30, 2024

ಮಧ್ಯಪ್ರದೇಶ ಸಿಎಂ ಆಗಿ ಕಮಲ್​ನಾಥ್ ಆಯ್ಕೆ

ಕಳೆದೆರಡು ದಿನದಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಮಧ್ಯಪ್ರದೇಶದ ಸಿಎಂ ಪಟ್ಟ ಗೊಂದಲಕ್ಕೆ ತೆರೆ ಬಿದ್ದಿದೆ. ನೂತನ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಆಯ್ಕೆಯಾಗಿದ್ದಾರೆ.

ಪಕ್ಷದ ಗೆಲುವಿನಲ್ಲಿ ಬಹಳ ಶ್ರಮ ವಹಿಸಿದ್ದ ಹಿರಿಯ ನಾಯಕ ಕಮಲ್​ನಾಥ್ ಹಾಗೂ ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯ ಸಿಎಂ ಪಟ್ಟದ ರೇಸ್​ನಲ್ಲಿದ್ದರು. ಸದ್ಯ ಕಾಂಗ್ರೆಸ್ ಕಮಿಟಿ ಸಭೆ ನಡೆಸಿ ಸಿಎಂ ಆಯ್ಕೆಯ ಗೊಂದಲವನ್ನು ಬಗೆಹರಿಸಿದೆ. ಮಧ್ಯಾಹ್ನ ಕಮಲನಾಥ್ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜ್ಯೋತಿರಾಧಿತ್ಯ ಸಿಂಧಿಯರನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES