Saturday, June 22, 2024

ಅರಿಶಿನಶಾಸ್ತ್ರದಲ್ಲಿ ದಿಂಗತ್-ಐಂದ್ರಿತಾ ಸಖತ್ ಸ್ಟೆಪ್..!

ಸ್ಯಾಂಡಲ್ ವುಡ್​ನ ಮತ್ತೊಂದು ಮುದ್ದಾದ ಜೋಡಿ ಇಂದು ದಾಂಪತ್ಯಕ್ಕೆ ಕಾಲಿಡುತ್ತಿದೆ. ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೈ ಇಂದಿನಿಂದ ಹೊಸ ಜೀವನ ಆರಂಭಿಸ್ತಿದ್ದಾರೆ.
ಕಳೆದ 9 ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸ್ತಿದ್ರು. ಇದೀಗ ಕಂಕಣಭಾಗ್ಯ ಕೂಡಿಬಂದಿದೆ. ಮಂಗಳವಾರ ಅರಿಶಿನಶಾಸ್ತ್ರ ನಡೆಯಿತು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ದಿಗಂತ್ _ಐಂದ್ರಿತಾ ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ..!
ಸಂಜೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಬೆಂಗಾಲಿ ಸ್ಟೈಲ್ ನಲ್ಲಿ ದಿಂಗತ್-ಐಂದ್ರಿತಾ ಮದ್ವೆ ನಡೆಯುತ್ತೆ. ಮದುವೆ ಇನ್ವಿಟೇಶನ್ ಅನ್ನು ಸಿಂಪಲ್ಲಾಗಿ ಮಾಡಿಸಿದ್ದ ಜೋಡಿ, ತಾವು ಸಿಂಪಲ್ ಆಗಿಯೇ ಮದ್ವೆ ಆಗ್ತೀವಿ. ದುಂದುವೆಚ್ಚ ಮಾಡಲ್ಲ ಅಂತ ಹೇಳಿದ್ರು. ಅಂತೆಯೇ ಬಹಳ ಸರಳವಾಗಿ ವಿವಾಹವಾಗ್ತಿದ್ದಾರೆ. ಆಪ್ತರು ಮತ್ತು ಸಿನಿರಂಗದವರಿಗೆ ಮಾತ್ರ ಮದ್ವೆಗೆ ಆಮಂತ್ರಣ ನೀಡಿದ್ದಾರೆ.

RELATED ARTICLES

Related Articles

TRENDING ARTICLES