Wednesday, September 18, 2024

ತೆಲಂಗಾಣದಲ್ಲಿ ಮತ್ತೆ ಟಿಆರ್​ಎಸ್ ಅಧಿಕಾರಕ್ಕೆ

ತೆಲಂಗಾಣದಲ್ಲಿ ಟಿಆರ್ ಎಸ್ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಸಿಎಂ ಆಗಿ ಕೆ. ಚಂದ್ರಶೇಕರ್ ರಾವ್ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ತೆಲಂಗಾಣ ಭವನದಲ್ಲಿ ಕೆಸಿಆರ್​ ಮಾತಾಡಿದ್ಧಾರೆ. ‘ನನಗೆ ಮತ ಹಾಕಿದ ತೆಲಂಗಾಣ ಜನತೆಗೆ ಧನ್ಯವಾದ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನ ಈಡೇರಿಸುತ್ತೇವೆ’ ಅಂತ ವಿಶ್ವಾಸವ್ಯಕ್ತಪಡಿಸಿದ್ಧಾರೆ.
ಅವಧಿಗೂ ಮುನ್ನ ತೆಲಂಗಾಣ ವಿಧಾಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದ ಹಂಗಾಮಿ ಮುಖ್ಯಮಂತ್ರಿ ಹಾಗೂ ಟಿಆರ್ ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಗಜ್ವೇಲ್ ಕ್ಷೇತ್ರದಲ್ಲಿ 51, 515 ಮಂತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೆಸಿಆರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ವಂಟೇರು ಪ್ರತಾಪ ರೆಡ್ಡಿ ವಿರುದ್ಧ 51, 515 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 19,366 ಮತಗಳಿಂದ ವಂಟೇರು ವಿರುದ್ಧ ಗೆದ್ದಿದ್ದ ಕೆಸಿಆರ್ ಅವರು ಈ ಸಲ ಭಾರಿ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ.
ತೆಲಂಗಾಣ ರಾಜ್ಯ ರಚನೆಗೂ ಮುನ್ನ ಸಿದ್ದಿಪೇಟೆ, ಕರೀಂನಗರದಿಂದ ಸ್ಪರ್ಧಿಸುತ್ತಿದ್ದ ಕೆಸಿಆರ್ ಅವರು 2014ರಲ್ಲಿ ಮೊದಲ ಬಾರಿಗೆ ಗಜ್ವೇಲ್ನಿಂದ ಕಣಕ್ಕಿಳಿದಿದ್ದರು. ತೆಲಂಗಾಣದ ಒಟ್ಟು 119 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಸಿಆರ್ ನೇತೃತ್ವದ ಟಿಆರ್ ಎಸ್ 86 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು, ಕೆಸಿಆರ್ ಅವರು ನಾಳೆ ಎರಡನೇ ಬಾರಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ತೆಲಂಗಾಣದಲ್ಲಿ ಒಟ್ಟು 119 ಕ್ಷೇತ್ರಗಳಲ್ಲಿ ಟಿಆರ್​ಎಸ್ 88 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ 21ಕ್ಕೆ ತೃಪ್ತವಾಗಿದೆ.

RELATED ARTICLES

Related Articles

TRENDING ARTICLES