Wednesday, September 18, 2024

ಮತ್ತೆ ಸಿದ್ದರಾಮಯ್ಯ ಸಿಎಂ..?

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ಏರ್ತಾರಾ..? ಹೀಗೊಂದು ಕುತೂಹಲ ಹಾಗೂ ಪ್ರಶ್ನೆ ಕಾಡಲು ಕಾರಣ ಕಂಪ್ಲಿ ಎಂಎಲ್​ಎ ಜೆ.ಎನ್ ಗಣೇಶ್ ಅವ್ರು ನೀಡಿರೋ ಹೇಳಿಕೆ..!
ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗ್ಬೇಕು ಅಂತ ಗಣೇಶ್ ಹೇಳಿದ್ದಾರೆ. ಇದು ಅಧಿವೇಶನಕ್ಕೆ ಮುನ್ನ ಮೈತ್ರಿ ಸರ್ಕಾರದಲ್ಲಿ ಕೋಲಾಹಲ ಉಂಟು ಮಾಡಿದೆ.
ವಿಧಾನಸೌಧದಲ್ಲಿ ಮಾತಾನಾಡಿದ ಗಣೇಶ್, “ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು. 40-50 ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಬಲಿಸ್ತಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅನ್ನೋದು ನಮ್ಮ ಆಶಯ. ಕಾಂಗ್ರೆಸ್ ನ ಹಲವು ಶಾಸಕರಿಗೆ ಈ ಭಾವನೆ ಇದೆ”ಅಂತ ಹೇಳಿದ್ದಾರೆ.
ಈ ಹೇಳಿಕೆ ಮೂಲಕ ಗಣೇಶ್ ಹೊಸ ರಾಜಕೀಯ ಲೆಕ್ಕಾಚಾರವೊಂದನ್ನು ತೆರೆದಿಟ್ಟಿದ್ದಾರೆ. ಇದು ಮೈತ್ರಿಯ ಆತಂಕ ಹೆಚ್ಚಿಸಿದ್ದು, ಕೋಲಾಹಲಕ್ಕೂ ಕಾರಣವಾಗಿದೆ. ಸಮನ್ವಯ ಸಮಿತಿ ಸಭೆಯ ಬೆನ್ನಲ್ಲೇ ಗಣೇಶ್ ನೇರ ನೇರವಾಗಿ ನೀಡಿರುವ ಈ ಹೇಳಿಕೆ ಚರ್ಚೆಯನ್ನು ಹುಟ್ಟುಹಾಕಿದೆ. ನಿಜಕ್ಕೂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ 40-50 ಶಾಸಕರು ನಿಂತಿದ್ದಾರಾ..? ಗಣೇಶ್​ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಯ ಹಸ್ತ ಇದೆಯೇ..? ಗಣೇಶ್ ಅವರ ಹೇಳಿಕೆಯ ಹಿಂದಿನ ಮರ್ಮವೇನು ಅನ್ನೋದು ಸದ್ಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಟಾಪಿಕ್.

ಸಂಪುಟ ವಿಸ್ತರಣೆ ಇಲ್ಲ : ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ ಆಗಲ್ಲ ಅಂತಲೂ ಜೆ.ಎನ್ ಗಣೇಶ್ ಸಂಪುಟ ವಿಸ್ತರಣೆ ಬಗ್ಗೆ ಬಾಂಬ್ ಸಿಡಿಸಿದ್ದಾರೆ. ಮುಂದೆ ಲೋಕಸಭಾ ಚುನಾವಣಾ ಇರೋದ್ರಿಂದ ಸಂಪುಟ ವಿಸ್ತರಣೆ ಅನುಮಾನ. ಇದು ಕಣ್ಣೊರೆಸೋ ತಂತ್ರ ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES