Monday, December 9, 2024

ಇಲ್ಲಿ ಕನ್ನಡಿಗ ದ್ರಾವಿಡ್ ಸಾಧನೆಯೇ ದೊಡ್ಡದು..! ಕೊಹ್ಲಿಗೆ ರಾಹುಲ್ ರೆಕಾರ್ಡ್ ಮುರಿಯೋ ಚಾನ್ಸ್ ..!

ವಿಶ್ವ ಕ್ರಿಕೆಟ್​​ ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಕುತೂಹಲ ಹುಟ್ಟುಹಾಕಿದೆ. ಬಲಿಷ್ಠ ಬ್ಯಾಟಿಂಗ್ ಹಾಗೂ ಬಿಗಿ ಬೌಲಿಂಗ್ ಪಡೆ ಟೀಮ್ಇಂಡಿಯಾದಲ್ಲಿದ್ರೂ ಏಷ್ಯಾ ಖಂಡವನ್ನು ಹೊರತು ಪಡಿಸಿ ವಿದೇಶಿ ಪಿಚ್ಗಳಲ್ಲಿ ಭಾರತದ ಆಟ ನಡಿಯಲ್ಲ ಎಂಬ ಅಪವಾದ ಇದ್ದೇ ಇದೆ. ಇದರ ಹೊರತಾಗಿ ಈ ಸರಣಿಯನ್ನು ಕೊಹ್ಲಿ ಪಡೆ ಗೆಲ್ಲುತ್ತೆ ಅನ್ನೋ ಮಾತು ಹೆಚ್ಚು ಸದ್ದು ಮಾಡ್ತಿದೆ. ಈ ಮೂಲಕ ಕಾಂಗರೂ ನಾಡಿನಲ್ಲಿ ಟೀಮ್ಇಂಡಿಯಾ ಮೊದಲ ಸರಣಿ ಜಯಿಸಿ ಇತಿಹಾಸ ನಿರ್ಮಿಸುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿರೋ ಅಂಶ.  ಹೀಗಾಗಿಯೇ ಇಡೀ ಕ್ರಿಕೆಟ್ ಜಗತ್ತು ಅಡಿಲೇಡ್ ಓವಲ್ ಮೈದಾನದತ್ತ ತಿರುಗಿದೆ. ಹಾಗಾದ್ರೆ ಈ ಅಂಗಳದಲ್ಲಿ ಟೀಮ್ಇಂಡಿಯಾ ಪರ ಬೆಸ್ಟ್ ಪರ್ಫಾಮೆನ್ಸ್ ಹೇಗಿದೆ? 

ಡಿಸೆಂಬರ್ 6 ರಂದು ಅಡಿಲೇಡ್​​ನಲ್ಲಿ ಮೊದಲ ಟೆಸ್ಟ್ ಮ್ಯಾಚ್ ಆರಂಭವಾಗಲಿದೆ. ಅಡಿಲೇಡ್ ಒವಲ್​ನ ಪಿಚ್ ಬ್ಯಾಟ್ಸ್​ಮನ್ ಗಳಿಗೆ  ಸಹಕಾರಿಯಾಗಿದ್ರೂ ಈ ಅಂಗಳದಲ್ಲಿ ಭಾರತದ ಸ್ಟ್ಯಾಟಿಕಲ್ ರೆಕಾರ್ಡ್ಸ್ ಕಳಪೆ ಮಟ್ಟದಲ್ಲಿದೆ.

ಭಾರತ ಈವರೆಗೂ ಇಲ್ಲಿ ಆಡಿರೋ 11 ಟೆಸ್ಟ್ ಗಳಲ್ಲಿ ಪೈಕಿ  ಕೇವಲ 1 ರಲ್ಲಿ ಮಾತ್ರ ಜಯ ಸಾಧಿಸಿದ್ರೆ, 3 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. ಇನ್ನುಳಿದ 7 ಪಂದ್ಯಗಳಲ್ಲಿ ಸೋಲುಂಡಿದೆ. ಆ ಒಂದು ಮ್ಯಾಚ್​ ಜಯಸಿದ್ದು 2003ರಲ್ಲಿ. ಆ ಐತಿಹಾಸಿಕ ಗೆಲುವಿನಲ್ಲಿ ಕನ್ನಡಿಗ ದ್ರಾವಿಡ್ ದ್ವಿಶತಕ ಸಿಡಿಸಿದ್ರು ಅನ್ನೋದು ವಿಶೇಷ. ಮತ್ತೆ ಈ ಪಿಚ್​ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಏಕೈಕ ಆಟಗಾರ ಕೂಡ ದ್ರಾವಿಡ್..!

ಇಲ್ಲಿ ಹೆಚ್ಚು ರನ್ ಸಿಡಿಸಿದ ಭಾರತೀಯ ಎಂಬ ದಾಖಲೆ ಕೂಡ ದ್ರಾವಿಡ್ ಹೆಸರಿನಲ್ಲಿದೆ.  ದ್ರಾವಿಡ್ ಈ ಅಂಗಳದಲ್ಲಿ 4 ಟೆಸ್ಟ್ ಪಂದ್ಯಗಳನ್ನಾಡಿ 401 ರನ್ ಗಳಿಸಿದ್ದಾರೆ. ಆದ್ರೆ ಈ ದಾಖಲೆಯನ್ನ ಈ ಸರಣಿಯಲ್ಲಿ ಮುರಿಯುವ ಅವಕಾಶ ವಿರಾಟ್ ಕೊಹ್ಲಿಗಿದೆ. ಅಡಿಲೆಡ್ ಓವೆಲ್ ನಲ್ಲಿ 2 ಪಂದ್ಯಗಳನ್ನಾಡಿರುವ ಕೊಹ್ಲಿ 394 ರನ್ ಸಿಡಿಸಿದ್ದಾರೆ.

ಬೌಲಿಂಗ್ ವಿಚಾರಕ್ಕೆ ಬಂದ್ರೆ, ಕಪಿಲ್ ದೇವ್  ಭಾರತದ ಪರ ಈ ಪಿಚ್ನಲ್ಲಿ ಬೆಸ್ಟ್ ಬೌಲಿಂಗ್ ಫರ್ಪಾಮೆನ್ಸ್ ನೀಡಿದ್ದಾರೆ. 1985-86ರಲ್ಲಿ ನಡೆದ ಸರಣಿಯಲ್ಲಿ ಕಪಿಲ್ ದೇವ್ 106 ರನ್ ನೀಡಿ 8 ವಿಕೆಟ್ ಕಬಳಿಸಿದ್ದು ಈ ವರೆಗೂ ಈ ಮೈದಾನದಲ್ಲಿ ಭಾರತೀಯ ಬೌಲರ್  ನೀಡಿದ ಬೆಸ್ಟ್ ಫರ್ಪಾಮೆನ್ಸ್ ಆಗಿದೆ. ಅಡಿಲೇಡ್ ಒವಲ್​ ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಕಪಿಲ್ ಮೊದಲಿಗರಾಗಿದ್ದಾರೆ. ಕಪಿಲ್ ದೇವ್ 3 ಟೆಸ್ಟ್ ಪಂದ್ಯಗಳಿಂದ ಈ ಮೈದಾನದಲ್ಲಿ 19 ವಿಕೆಟ್ ಕಬಳಿಸಿ ಅಗ್ರಸ್ಥಾನಿಯಾಗಿದ್ರೆ, 13 ವಿಕೆಟ್​ ಳೊಂದಿಗೆ ಅಜಿತ್ ಅಗರ್ಕರ್ ಹಾಗೂ 10 ವಿಕೆಟ್ ಗಳೊಂದಿಗೆ ಅನಿಲ್ ಕುಂಬ್ಳೆ ಕ್ರಮವಾಗಿ 2 ಮತ್ತು 3 ನೇ ಸ್ಥಾನದಲ್ಲಿದ್ದಾರೆ.

 

RELATED ARTICLES

Related Articles

TRENDING ARTICLES