Wednesday, September 18, 2024

ಕಾಂಗ್ರೆಸ್​ ತಪ್ಪುಗಳನ್ನು ಸರಿಮಾಡೋದೆ ನನ್ನ ಗುರಿ: ಮೋದಿ

ಜೈಪುರ: ‘ಕಾಂಗ್ರೆಸ್​ನ ತಪ್ಪುಗಳನ್ನು ಸರಿ ಮಾಡೋದೆ ನನ್ನ ಗುರಿ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ರಾಜಸ್ಥಾನದ ಹನುಮಾನ್​ಗರ್​ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮೋದಿ, ಕಾಂಗ್ರೆಸ್​ ನಾಯಕರ ದೂರದೃಷ್ಟಿ ಮತ್ತು ಸಂವೇದನಾಶೀಲತೆಯ ಕೊರತೆಯಿಂದ ಪ್ರಮುಖ ಸಿಖ್ಖ್ ಮುಂದಿರ ಕರ್ತಾರ್​ಪುರ್​ ಸಾಹಿಬ್​ ಗುರುದ್ವಾರ ಪಾಕಿಸ್ತಾನದ ಪಾಲಾಯಿತು ಎಂದಿದ್ದಾರೆ.

ಕರ್ತಾರ್​​ಪುರ್​ ಕಾರಿಡಾರ್​​ನಿಂದಾಗಿ ಸಿಖ್ಖ್ ಯಾತ್ರಿಗಳು ಗುರುದ್ವಾರಕ್ಕೆ ಭೇಟಿ ನೀಡಲು ಅನುಕೂಲವಾಯಿತು. ಆದರೆ ಯಾಕೆ 70ವರ್ಷಗಳ ಹಿಂದೆಯೇ ಈ ಕಾರಿಡಾರ್ ನಿರ್ಮಿಸಲಿಲ್ಲ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಸಿದ್ದಾರೆ. ಕಾರ್ತಪುರ ಕಾರಿಡಾರ್​ ನಿರ್ಮಾಣದ ಹಿರಿಮೆ ನಿಮ್ಮ ಅಮೂಲ್ಯ ಮತಗಳಿಗೆ ಸಲ್ಲುತ್ತದೆ. ಕಾಂಗ್ರೆಸ್​ನ ತಪ್ಪುಗಳನ್ನು ಸರಿ ಮಾಡೋದು ನನ್ನ ಗುರಿ. ಕಾಂಗ್ರೆಸ್​ ನಾಯಕರಿಗೆ ಗುರುನಾನಕ್ ಅವರ ಹಿರಿಮೆ ಗೊತ್ತಿಲ್ಲ. ಸಿಖ್ಖ್​ ಭಾವನೆಗಳ ಕುರಿತು ಅವರಿಗೆ ಯಾವುದೇ ಗೌರವ ಇಲ್ಲ” ಅಂದಿದ್ದಾರೆ. ಶುಕ್ರವಾರದ ತನಕ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.

 

RELATED ARTICLES

Related Articles

TRENDING ARTICLES