ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವ್ರಿಗೆ ಸ್ಥಾನ ಸಿಗದೇ ಇದ್ರೆ ತಾನು ಆಸೀಸ್ ಗೆ ಸಪೋರ್ಟ್ ಮಾಡ್ತೀನಿ ಅಂತ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ ಅನ್ನಲಾಗಿರೋ ಫೋಟೋವೊಂದು ವೈರಲ್ ಆಗ್ತಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಟೀಮ್ ಇಂಡಿಯಾ ಡಿಸೆಂಬರ್ 6ರಂದು ಅಡಿಲೇಡ್ ನಲ್ಲಿ ನಡೆಯಲಿರೋ ಫಸ್ಟ್ ಟೆಸ್ಟ್ ಗೆ ರೆಡಿಯಾಗ್ತಾ ಇದೆ. ಟೀಮ್ ನಲ್ಲಿ ರೋಹಿತ್ ಶರ್ಮಾ ಇರದೇ ಇದ್ರೆ ನಾನು ಆಸ್ಟ್ರೇಲಿಯಾಕ್ಕೆ ಬೆಂಬಲ ನೀಡ್ತೀನಿ ಅಂತ ಹರ್ಭಜನ್ ಸಿಂಗ್ ಹೇಳಿದ್ದಾರೆ ಎನ್ನಲಾಗಿರೋ ಪೋಸ್ಟ್. ಈ ಪೋಸ್ಟ್ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಹರ್ಭಜನ್ ಸಿಂಗ್ ಇದು ನನ್ನ ಪೋಸ್ಟ್ ಅಲ್ಲ, ಇದು ಫೇಕ್ ಅಂತ ಸ್ಪಷ್ಟಪಡಿಸಿದ್ದಾರೆ. ”ಫೇಕ್ ಸೋಶಿಯಲ್ ಮೀಡಿಯಾ’ ಅಂತ ಬರ್ಕೊಂಡಿದ್ದಾರೆ.
ರೋಹಿತ್ ಶರ್ಮಾ ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಟೆಸ್ಟ್ ತಂಡದಿಂದ ರೋಹಿತ್ ಅವರನ್ನು ಹೊರಗಿಡಲಾಗಿದೆ.
ರೋಹಿತ್ ಆಡ್ದೆ ಇದ್ರೆ ಆಸೀಸ್ಗೆ ನನ್ನ ಸಪೋರ್ಟ್ ಅಂದ ಹರ್ಭಜನ್..!
TRENDING ARTICLES