ಕೊಚ್ಚಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆಯಂತೆ ನಾಲ್ಕು ಸದಸ್ಯರ ತಂಡ ಶಬರಿಮಲೆ ಕುರಿತಾದ ಮಾಹಿತಿ ಸಂಗ್ರಹಿಸಲು ಕೇರಳ ತಲುಪಿದೆ. ಕೊಚ್ಚಿಯಲ್ಲಿ ಶಬರಿಮಲೆ ಭಕ್ತರು ಹಾಗೂ ಆರ್ಎಸ್ಎಸ್ ಕಾರ್ಯಕರ್ತರನ್ನು ಭೇಟಿ ಮಾಡಲಿರುವ ತಂಡ ವಿವಾದದ ಕುರಿತಾದ ವಿವರವಾದ ಮಾಹಿತಿ ಪಡೆಯಲಿದ್ದಾರೆ. ಸರೋಜ್ಪಾಂಡೆ, ವಿನೋದ್ ಸೋನ್ಕರ್, ಪ್ರಹ್ಲಾದ್ ಜೋಶಿ ಹಾಗೂ ನಳಿನ್ ಕುಮಾರ್ ಕಟೀಲ್ ಅವರನ್ನು ಒಳಗೊಂಡ ತಂಡ ತಳಮಟ್ಟದಲ್ಲಿ ಮಾಹಿತಿ ಪಡೆದು 15 ದಿನಗಳೊಳಗಾಗಿ ಅಮಿತ್ ಶಾ ಅವರಿಗೆ ವರದಿ ನೀಡಲಿದೆ. ಹಾಗೇ ಪಂದಳ ರಾಜಕುಟುಂಬವನ್ನು ಭೇಟಿ ಮಾಡಲಿದೆ.