ರಾಹುಲ್ ಹೆಸ್ರಿನ ಮುಂದೆ ‘ಗಾಂಧಿ’ ಅನ್ನುವ ಪದ ಇರದಿದ್ದರೆ ರಾಹುಲ್ ಗಾಂಧಿ ಜಿಲ್ಲಾಧ್ಯಕ್ಷರಾಗಿಯೂ ಆಯ್ಕೆ ಆಗ್ತಿರ್ಲಿಲ್ಲ..! ಹೀಗಂತ ಹೇಳಿರೋದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವ್ರು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾನಾಡಿದ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ವಂಶ ರಾಜಕೀಯ ಮತ್ತು ಸ್ವಜನಪಕ್ಷಪಾತದ ಪಕ್ಷ. ರಾಹುಲ್ ಹೆಸರಿನ ಮುಂದೆ ಗಾಂಧಿ ಅನ್ನೋ ಪದವೊಂದು ಇರದೇ ಹೋಗಿದ್ರೆ ರಾಹುಲ್ ಪಕ್ಷದ ಜಿಲ್ಲಾಧ್ಯಕ್ಷರೂ ಆಗುತ್ತಿರಲಿಲ್ಲ ಅಂತ ಹೇಳಿದ್ರು.
ಜವಹಾರಲಾಲ್ ನೆಹರು, ಸರ್ದಾರ್ ಪಟೇಲ್ ಅವರಂತಹ ವ್ಯಕ್ತಿಗಳಿಂದ ಕಾಂಗ್ರೆಸ್ ಪಕ್ಷ ಎತ್ತರಕ್ಕೇರಿದೆ. ರಾಹುಲ್ ಈ ಗಾಂಧಿ ಫ್ಯಾಮಿಲಿಯಲ್ಲಿ ಹುಟ್ಟದಿದ್ದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗ್ತಿರ್ಲಿಲ್ಲ.
ರಾಹುಲ್ ಗೋತ್ರ ಬಹಿರಂಗ ವಿವಾದದ ಬಗ್ಗೆ ಮಾತಾನಾಡಿದ ರವಿಶಂಕರ್ ಪ್ರಸಾದ್, ‘ಈ ವಿಚಾರವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಎಳೆದು ತಂದಿರೋದ್ರಿಂದ ಬಿಜೆಪಿ ಇದನ್ನು ಚರ್ಚಿಸ್ತಿದೆ. ರಾಜಸ್ಥಾನಕ್ಕೆ ಹೋದಾಗ ರಾಹುಲ್ ಕೌಲ ಬ್ರಾಹ್ಮಣ, ಗುಜರಾತ್ ಗೆ ಹೋದ್ರೆ ಶಿವಭಕ್ತ..! ನಿಜವಾದ ಸಮಸ್ಯೆಗಳ ಬಗ್ಗೆ ತಿಳಿಯದೇ, ಅದರ ಬಗ್ಗೆ ಮಾತನಾಡಲು ಸಾಧ್ಯವಾಗದೆ ಈ ರೀತಿ ಮಾಡುತ್ತಾರೆ ಅಂತ ಟೀಕಿಸಿದ್ರು.
ರಾಹುಲ್ ‘ಗಾಂಧಿ’ ಇಲ್ಲದಿದ್ದರೆ ಜಿಲ್ಲಾಧ್ಯಕ್ಷರೂ ಆಗ್ತಿರ್ಲಿಲ್ಲ..!
TRENDING ARTICLES