ವುಮೆನ್ಸ್ ವರ್ಲ್ಡ್ ಕಪ್ನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾದಿಂದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಹೊರಗಿಟ್ಟಿದ್ದು ಚರ್ಚೆಗೆ ಕಾರಣವಾಗಿದೆ. ಬಿಸಿಸಿಐ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಗೆಲ್ಲಲೇಬೇಕಾದ ಮ್ಯಾಚ್ನಿಂದ ನಂಬರ್ 1 ಟಿ20 ಪ್ಲೇಯರ್ ಮಿಥಾಲಿ ರಾಜ್ ಅವರನ್ನು ಕೈಬಿಟ್ಟಿದ್ದರಿಂದ ಟೀಇಂಡಿಯಾ ಇಂಗ್ಲೆಂಡ್ಗೆ ಸುಲಭ ತುತ್ತಾಗಿತ್ತು. ಇದ್ರೊಂದಿಗೆ ಚೊಚ್ಚಲ ಟಿ20 ವರ್ಲ್ಡ್ಕಪ್ ಗೆಲ್ಲುವ ಅವಕಾಶದಿಂದ ಭಾರತ ವಂಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಸಭೆ ನಡೆಸಿ ಸಂಬಂಧಪಟ್ಟವರಿಂದ ವರದಿ ಪಡೆಯಲಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಮೂಲಗಳ ಪ್ರಕಾರ ಬಿಸಿಸಿಐ ಸಭೆ ನಡೆಸಿ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್, ಮಿಥಾಲಿ ರಾಜ್, ಕೋಚ್ ರಮೇಶ್ ಪವಾರ್, ಮ್ಯಾನೇಜರ್ ತೃಪ್ತಿ ಭಟ್ಟಾಚಾರ್ಯ, ಟೀಂ ಇಂಡಿಯಾದ ಆಯ್ಕೆ ಸಮಿತಿ ಸದಸ್ಯೆ ಸುಧಾ ಶಾ ಅವರಿಂದ ವಿವರಣೆ ಪಡೆಯಲಿದೆ.
ಇನ್ನು ಮಿಥಾಲಿ ಅವ್ರನ್ನು ಪ್ಲೇಯಿಂಗ್ 11ನಿಂದ ಕೈಬಿಟ್ಟ ಬಗ್ಗೆ ಸಿಒಎ ಮುಖ್ಯಸ್ಧ ವಿನೋದ್ ರೈ “ಮಹಿಳಾ ತಂಡದಲ್ಲಿ ಏನೋ ಏರುಪೇರಾಗಿದೆ ಅದನ್ನ ಪರಿಶೀಲಿಸಬೇಕಿದೆ” ಅಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು 8 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು.