Saturday, September 14, 2024

ಹುಸಿ ಕೋಪದಿಂದಲೇ ಪ್ರೀತಿ ಸಂಪಾದಿಸಿದ್ದ ಎಲ್ಲರ ಅಣ್ಣ ಅಂಬಿ – ಡಿ.ವಿ ಸದಾನಂದ ಗೌಡ

ಮಂಡ್ಯದ ಗಂಡು ಅಂಬರೀಶ್ ನಿಧನಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಸಂತಾಪ ಸೂಚಿಸಿದ್ದಾರೆ. ಅಂಬರೀಶ್ ಎಲ್ಲರ ಪ್ರೀತಿಯ ಹಿರಿಯಣ್ಣ. ಸಹೃದಯಿ ಇನ್ನಿಲ್ಲ ಅನ್ನೋ ಮಾತು ಬಹಳ ಕಠಿಣ ಅಂತ ಸದಾನಂದ ಗೌಡ್ರು ಬೇಸರ ವ್ಯಕ್ತಪಡಿಸಿದ್ದಾರೆ.
”ಅಂಬರೀಷ್ ತಮ್ಮ ಒಳ್ಳೆಯತನದಿಂದ ಎಲ್ಲರ ಅಣ್ಣ , ಎಲ್ಲರ ಸ್ನೇಹಿತ, ತಮ್ಮ ಹುಸಿ ಕೋಪ ಮುನಿಸಿನಿಂದಲೇ ಲಕ್ಷಾಂತರ ಜನರ ಪ್ರೀತಿ ಸಂಪಾದಿಸಿದ್ದ ಅಣ್ಣ . ಚಿತ್ರನಟರಾಗಿ , ರಾಜಕಾರಣಿಯಾಗಿ , ಹಿರಿಯಣ್ಣರಾಗಿ ಭಾವುಕ ಪ್ರೀತಿ ತೋರಿಸಿದ್ದ ಸಹೃದಯಿ ಇನ್ನಿಲ್ಲವೆಂಬ ಮಾತು ಅತ್ಯಂತ ಕಠಿಣ . ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಎಲ್ಲರಿಗೂ ಭಗವಂತ ನೀಡಲಿ” ಅಂತ ಸದಾನಂದ ಗೌಡ್ರು ಟ್ವೀಟ್ ಮಾಡಿದ್ದಾರೆ.

 

ಅಂಬರೀಶ್ ನಿಧನಕ್ಕೆ ರಜನಿಕಾಂತ್ ಸಂತಾಪ

ರೆಬಲ್ ಸ್ಟಾರ್ ಅಂಬರೀಶ್ ವಿಧಿವಶ

 

RELATED ARTICLES

Related Articles

TRENDING ARTICLES