Friday, September 20, 2024

ಫಸ್ಟ್ ಮ್ಯಾಚಲ್ಲೇ 5 ವಿಕೆಟ್ ಪಡೆದ 17ರ ಬೌಲರ್..!

ಕ್ರಿಕೆಟ್ ಜಗತ್ತೇ ಹಾಗೇ..ಲೆಕ್ಕವಿಲ್ಲದಷ್ಟು ದಾಖಲೆಗಳ ಆಗರ. ದಿನಕ್ಕೊಂದು ರೆಕಾರ್ಡ್ ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗುತ್ತಲೇ ಇರುತ್ತದೆ. ಅಂತೆಯೇ ಯುವ ಬೌಲರ್ ಒಬ್ಬರು ತಮ್ಮ ಫಸ್ಟ್ ಮ್ಯಾಚ್ ನಲ್ಲೇ ರೆಕಾರ್ಡ್ ಮಾಡಿದ್ದಾರೆ.
ಬಾಂಗ್ಲಾ ದೇಶದ ಯುವ ಸ್ಪಿನ್ನರ್ ನಯೀಮ್ ಹಸನ್ (17) ದಾಖಲೆ ನಿರ್ಮಿಸಿದವರು. ಚಿತ್ತಗಾಂಗ್ ನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮ್ಯಾಚ್ ನಲ್ಲಿ ಹಸನ್ 5 ವಿಕೆಟ್ ಪಡೆದಿದ್ದಾರೆ. ಚೊಚ್ಚಲ ಮ್ಯಾಚ್ ನಲ್ಲೇ 5 ವಿಕೆಟ್ ಪಡೆಯೋ ಮೂಲಕ ಕ್ರಿಕೆಟ್ ಜಗತ್ತಿನ ಭವಿಷ್ಯದ ಸ್ಟಾರ್ ಅಂತ ಸಾರಿದ್ದಾರೆ.
ನಯೀಮ್ ಹಸನ್ 14 ಓವರ್ ಗಳಲ್ಲಿ 61 ರನ್ ನೀಡಿ 5 ವಿಕೆಟ್ ಕಿತ್ತಿದ್ದಾರೆ. ಇದ್ರಿಂದ ಪ್ರವಾಸಿ ವಿಂಡೀಸ್ ಪ್ರಥಮ ಇನ್ನಿಂಗ್ಸ್ ನಲ್ಲಿ 246 ರನ್ ಗಳಿಗೆ ಆಲ್ ಔಟ್ ಆಗಿದೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ಬಳಿಕ ಫಸ್ಟ್ ಮ್ಯಾಚ್ ನಲ್ಲೇ 5 ವಿಕೆಟ್​ ಪಡೆದ ವಿಶ್ವದ 2ನೇ ಮತ್ತು ಬಾಂಗ್ಲಾದ ಮೊದಲ ಬೌಲರ್​​ ಅನ್ನೋ ಕೀರ್ತಿಗೆ ನಯೀಮ್ ಹಸನ್ ಪಾತ್ರರಾಗಿದ್ದಾರೆ.

RELATED ARTICLES

Related Articles

TRENDING ARTICLES