Wednesday, May 22, 2024

ಮೇರಿ ಕೋಮ್ ವರ್ಲ್ಡ್ ರೆಕಾರ್ಡ್ – 6 ನೇ ಬಾರಿ ಚಾಂಪಿಯನ್

ಪ್ರಸಕ್ತ ಸಾಲಿನ ವಿಶ್ವ ಚಾಂಪಿಯನ್​​ಷಿಪ್​ನಲ್ಲಿ ಭಾರತದ ಮೇರಿ ಕೋಮ್​ ದಾಖಲೆ ಬರೆದಿದ್ದಾರೆ. 6 ಬಾರಿ ವಿಶ್ವ ಚಾಂಪಿಯನ್​ ಆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನವದೆಹಲಿಯ ಕೆಡಿ ಜಾಧವ್​ ಒಳಾಂಗಣ ಕ್ರಿಡಾಂಗಣದಲ್ಲಿ ಇಂದು ನಡೆದ 48 ಕೆಜಿ ವಿಭಾಗದ ಫೈನಲ್​ ನಲ್ಲಿ ಭಾರತದ ಮೇರಿ ಕೋಮ್​, ಉಕ್ರೇನ್​ನ ಹನ್ನಾ ಒಖೋಟಾರನ್ನ ಮಣಿಸಿದ್ರು. 5-0 ಅಂತರದಲ್ಲಿ ಎದುರಾಳಿಯನ್ನು ಮಣಿಸೋ ಮೂಲಕ ಮೇರಿಕೂಮ್ 6 ಬಾರಿ ವಿಶ್ವಚಾಂಪಿಯನ್‌ ಆದ ಮೊದಲ ಮಹಿಳಾ ಬಾಕ್ಸರ್​​ ಅನ್ನೋ ಹೆಗ್ಗಳಿಕೆಗೆ ಪಾತ್ರರಾದ್ರು.
ಇದುವರೆಗೂ 5 ಬಾರಿ ಚಾಂಪಿಯನ್​ ಆಗಿದ್ದ ಐರ್ಲೆಂಡ್​ನ​ ಕೇಟಿ ಟೇಲರ್​ ಹೆಚ್ಚು ಬಾರಿ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ ಆದ ಆಟಗಾರ್ತಿಯಾಗಿದ್ರು. ಇದೀಗ 6ನೇ ಬಾರಿ ಸ್ವರ್ಣಕ್ಕೆ ಮುತ್ತಿಕ್ಕಿದ ಮೇರಿಕೋಮ್‌ ಹೆಚ್ಚು ಬಾರಿ ಚಾಂಪಿಯನ್​ ಆದ ಕೀರ್ತಿಗೆ ಭಾಜನರಾದ್ರು. ದಾಖಲೆಯ ಪಂದ್ಯ ಜಯಸಿದ ಬಳಿಕ ಭಾವುಕರಾಗಿ ಮಾತಾನಾಡಿದ ಮೇರಿ ಕೋಮ್​ ತನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಅಂತ ಹೇಳಿದ್ರು.
ಇವರು ಈ ಹಿಂದೆ 2002, 2005, 2006, 2008 ಮತ್ತು 2010ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಮತ್ತೊಂದು ವಿಶ್ವಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಕೇವಲ 35 ವರ್ಷಕ್ಕೆ 6 ಬಾರಿ ಚಾಂಪಿಯನ್‌ ಪಟ್ಟಕ್ಕೇರಿದ ಮೇರಿಕೋಮ್‌ ಹೊಸ ಇತಿಹಾಸ ಸೃಷ್ಠಿಸಿದ್ದಾರೆ.

-ವಸಂತ್​ ಮಳವತ್ತಿ. ಸ್ಪೋರ್ಟ್ಸ್​ ಬ್ಯೂರೋ ಪವರ್​ ಟಿವಿ

RELATED ARTICLES

Related Articles

TRENDING ARTICLES