ನೀವು ಪ್ರೀತಿ ಮಾಡ್ತಿದ್ದೀರಾ..? ಪೋಷಕರ ಕಣ್ತಪ್ಪಿಸಿ ದೇವಸ್ಥಾನಗಳಲ್ಲಿ ಮದುವೆ ಆಗ್ಬೇಕು ಅಂದುಕೊಂಡಿದ್ದೀರಾ..? ಹಾಗಾದ್ರೆ ಆ ಕನಸು ಮರೆತು ಬಿಡಿ. ಪೋಷಕರ ಕಣ್ತಪ್ಪಿಸಿ ಓಡಿ ಹೋಗಿ ಮದ್ವೆ ಆಗೋ ಪ್ರೇಮಿಗಳಿಗೆ ಇದು ಶಾಕಿಂಗ್ ನ್ಯೂಸ್…! ಇನ್ಮುಂದೆ ಪ್ರೇಮಿಗಳಿಗೆ ದೇವಸ್ಥಾನದಲ್ಲಿ ಮದ್ವೆ ಆಗುವಂತಿಲ್ಲ. ಹೌದು , ರಾಜ್ಯದಲ್ಲಿ ಮುಜುರಾಯಿ ಇಲಾಖೆ ಇಂಥಾ ಒಂದು ಕ್ರಮಕ್ಕೆ ಮುಂದಾಗಿದೆ. ಪ್ರೇಮಿಗಳ ವಿವಾಹಗಳಲ್ಲಿ ಆಗುವ ನಾನಾ ರೀತಿಯ ಪ್ರಕರಣಗಳನ್ನು ತಪ್ಪಿಸಲು ಮುಜರಾಯಿ ಇಲಾಖೆ ಈ ಕ್ರಮ ತೆಗೆದುಕೊಳ್ಳುತ್ತಿದೆ. ಲವ್ ಮ್ಯಾರೇಜ್ ಗಳಲ್ಲಿ ಪುರೋಹಿತರ ಮೇಲೂ ದೂರು ದಾಖಲಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇಂಥಾ ಪ್ರಕರಣಗಳಿಂದ ಪುರೋಹಿತರೂ ತೊಂದರೆ ಅನುಭವಿಸಬೇಕಾಗುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಲವ್ ಮ್ಯಾರೇಜ್ ಗಳಿಗೆ ಬ್ರೇಕ್ ಬೀಳಲಿದೆ. ಇನ್ನೊಂದು ವಾರದಲ್ಲಿ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಲಿದೆ.