ಮುಂಬೈ: ವರದಕ್ಷಿಣೆಗಾಗಿ ಪತಿ ಮತ್ತು ಆತನ ಕುಟುಂಬ ಮಹಿಳೆಗೆ ಕಿರುಕುಳ, ಹಿಂಸೆ ನೀಡೋ ಸಾಕಷ್ಟು ಪ್ರಕರಣಗಳು ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ಇಷ್ಟೇ ಅಲ್ಲ ಅಡುಗೆ ರುಚಿಯಿಲ್ಲ ಅಂತ ಪತ್ನಿಗೆ ಚಿತ್ರಹಿಂಸೆ ನೀಡಿ, ಇನ್ನೊಬ್ಬಳೊಂದಿಗೆ ಸಂಸಾರ ಮಾಡೋ ಜನರೂ ನಮ್ಮ ನಡುವೆ ಇದ್ದಾರೆ.
ಹೌದು, ಇಲ್ಲೋರ್ವ ಡಾಕ್ಟರೇ ತನ್ನ ಹೆಂಡ್ತಿಗೆ ಅಡುಗೆ ಮಾಡೋಕೆ ಬರಲ್ಲ ಅಂತ ಎರಡನೇ ಮದ್ವೆ ಆಗಿದ್ದಾನೆ..! ಈ ಘಟನೆ ಬೆಳಕಿಗೆ ಬಂದಿರೋದು ಮಹಾರಾಷ್ಟ್ರದಲ್ಲಿ. ”ನಾನು ಮಾಡೋ ಅಡುಗೆ ಚೆನ್ನಾಗಿರಲ್ಲ ಅಂತ ಪ್ರತಿದಿನ ನಂಗೆ ಹಿಂಸೆ ನೀಡಿ ನನ್ನ ಪತಿ ಈಗ ಬೇರೆ ಮದ್ವೆ ಆಗಿದ್ದಾರೆ” ಅಂತ ಮಹಿಳೆಯೊಬ್ಬರು ಕಪುರ್ಬಾವ್ಡಿ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಿದ್ದಾರೆ.
ತಾನು ಮಾಡುವ ಅಡುಗೆಯನ್ನು ನಿತ್ಯವೂ ಟೀಕಿಸುತ್ತಾ, ರುಚಿಯಾದ ಅಡುಗೆ ಮಾಡಲು ಬರುವುದಿಲ್ಲ ಅಂತ ಪತಿ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇಬ್ಬರೂ ಡಾಕ್ಟರ್ ಆಗಿದ್ದು, ಪ್ರೀತಿಸಿ ಮದ್ವೆ ಆಗಿದ್ದರು. ಸಂತ್ರಸ್ತೆ ಹಿಂದೂ ಧರ್ಮೀಯಳಾಗಿದ್ದು, ಮುಸ್ಲೀಂ ಧರ್ಮಕ್ಕೆ ಮತಾಂತರವಾಗಿ 2005ರಲ್ಲಿ ವಿವಾಹವಾಗಿದ್ರು.
”ನಾನು ಗರ್ಭಿಣಿಯಾಗಿದ್ದಾಗ ನನ್ನ ಇಚ್ಛೆಯ ವಿರುದ್ಧವಾಗಿ ಎಲೆಕ್ಷನ್ನಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. ನಾನು ಸೋತಿದ್ದೆ” ಎಂದೂ ಸಹ ಮಹಿಳೆ ಆರೋಪಿಸಿದ್ದಾರೆ.
ಪತ್ನಿ ಮಾಡಿದ ಅಡುಗೆ ರುಚಿಯಿಲ್ಲ ಅಂತ 2ನೇ ಮದ್ವೆಯಾದ ಡಾಕ್ಟರ್…!
TRENDING ARTICLES