Tuesday, April 16, 2024

ವರ್ಲ್ಡ್ ಕಪ್ ನಲ್ಲಿ ನಾನೇಕೆ ಯುವಿಗಿಂತ ಮುಂಚೆ ಬ್ಯಾಟಿಂಗ್ ಗೆ ಇಳಿದೆ..? ಧೋನಿ ಬಿಚ್ಚಿಟ್ಟ ರಹಸ್ಯ..!

ಅದು 2011 ಏಪ್ರಿಲ್​ 2.. ಆ ಸಂಜೆಯನ್ನು ಭಾರತದ ಯಾವೊಬ್ಬ ಕ್ರಿಕೆಟ್​ ಅಭಿಮಾನಿಯೂ ಎಂದೂ ಮರೆಯಲ್ಲ, ಮರೆಯಲು ಸಾಧ್ಯವೂ ಇಲ್ಲ. ಅಂದು ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ನಲ್ಲಿ ಟೀಮ್ಇಂಡಿಯಾ ಶ್ರೀಲಂಕಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿತ್ತು. 28 ವರ್ಷಗಳ ಬಳಿಕ ಎಂ ಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವರ್ಲ್ಡ್ ಕಪ್ ಗೆದ್ದಿತ್ತು.
ಆದ್ರೆ, ಅಂದಿನ ಮ್ಯಾಚ್ ನಲ್ಲಿ ಸ್ಪೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್​ ಅವರ ಮೊದಲು ಮಾಹಿ ಕಣಕ್ಕಿಳಿದಿದ್ರು. ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಯುವಿ ಬದಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಧೋನಿ ಕಣಕ್ಕಿಳಿದಿದ್ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಅಂದಿನಿಂದ ಎಲ್ರನ್ನೂ ಕಾಡ್ತಿದ್ದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸ್ವತಃ ಧೊನಿಯೇ ಆ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿರುವ ಧೋನಿ ‘ಅಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿದ್ದ ಹೆಚ್ಚಿನ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಚೆನೈ ತಂಡದಲ್ಲಿ ನನ್ನ ಜೊತೆಗಾರರಾಗಿದ್ದರು ಮತ್ತು ಶ್ರೀಲಂಕಾದ ಎಲ್ಲಾ ಬೌಲರ್‌ಗಳ ತಂತ್ರಗಾರಿಕೆ ನನಗೆ ಗೊತ್ತಿತ್ತು’ ಈ ಕಾರಣದಿಂದ ನಾನು ಕಣಕ್ಕಿಳಿದೆ ಎಂದಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದು ಮಾತ್ರವಲ್ಲ ಪಂದ್ಯದಲ್ಲಿ ಧೋನಿ ಬೆಸ್ಟ್ ಫರ್ಫಾರ್ಮೆನ್ಸ್ ಕೂಡ ನೀಡಿದ್ರು. ಮ್ಯಾಚ್ ನಲ್ಲಿ 79 ಎಸೆತಗಳಲ್ಲಿ 91ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ರು. ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅಲ್ ರೌಂಡಿಂಗ್ ಫರ್ಪಾಮೆನ್ಸ್ ನೀಡಿದ್ರು. ಟೂರ್ನಿಯ ಉದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ರು.

RELATED ARTICLES

Related Articles

TRENDING ARTICLES