Saturday, September 14, 2024

ಊಟದ ಟೇಬಲ್‍ಮೇಲೆಯೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು..!

ಕಾಲೇಜು ವಿದ್ಯಾರ್ಥಿಗಳು ಶಾಮಿಯಾನದಡಿ, ಊಟದ ಟೇಬಲ್ ಮೇಲೆ ಪರೀಕ್ಷೆ ಬರೆದಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಜಿಲ್ಲೆಯ ಹರಪ್ಪನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿಕಾಂ, ಬಿಬಿಎಂ,ಬಿಎಸ್ಸಿ ವಿದ್ಯಾರ್ಥಿಗಳು ಶಾಮಿಯಾನದಡಿ ಇಂದು ಪರಿಕ್ಷೆ ಬರೆದಿದ್ದಾರೆ..!
ಇದಕ್ಕೆ ಕಾರಣ ಕಾಲೇಜಲ್ಲಿ ಕೊಠಡಿ ವ್ಯವಸ್ಥೆ ಇಲ್ಲದೆ ಇರುವುದು. ಈ ಕಾಲೇಜಿನಲ್ಲಿ ಸುಮಾರು 1,394 ವಿದ್ಯಾರ್ಥಿಗಳಿದ್ದಾರೆ. ಆದ್ರೆ, ಇರುವುದು 7 ಕೊಠಡಿ ಮಾತ್ರ. ಪರೀಕ್ಷೆ ಬಂದ್ರೆ ವಿದ್ದಾರ್ಥಿಗಳಿಗೆ ಕೂರಲು ಜಾಗವಿಲ್ಲ, ಎಷ್ಟುಬಾರಿ ಅಧಿಕಾರಿಕಳಿಗೆ ಮನವಿ ಮಾಡಿದ್ರೂ
ಪ್ರಯೋಜನವಾಗದೆ ಬೇಸತ್ತ ಪ್ರಾಂಶುಪಾಲರು ಶಾಮಿಯಾನ, ಊಟದ ಟೇಬಲ್ ಅನ್ನು 7500 ಗೆ ಬಾಡಿಗೆ ತಂದು ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಿದ್ದಾರೆ. ಮಕ್ಕಳು ಪರೀಕ್ಷೆ ಬರೆಯೋ ಸಂದರ್ಭದಲ್ಲಿ ಮಳೆ ಬಂದ್ರೆ ಏನುಗತಿ ಅಂತ ಉಪನ್ಯಾಸಕರು ತಮ್ಮ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನ ನೋಡಿಯಾದ್ರೂ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ.

RELATED ARTICLES

Related Articles

TRENDING ARTICLES