Tuesday, October 15, 2024

ಸಿಎಂ ಪತ್ರಕ್ಕೆ ಕ್ಯಾರೇ ಅನ್ನದ ಅಧಿಕಾರಿಗಳು ‘ಪವರ್’ ಫುಲ್ ನ್ಯೂಸ್ ಗೆ ಎಚ್ಚೆತ್ತುಕೊಂಡ್ರು..!

ತುಮಕೂರು : ಇದು ಪವರ್ ಟಿವಿಯ ಇಂಪ್ಯಾಕ್ಟ್… ಮುಖ್ಯಮಂತ್ರಿಗಳ ಪತ್ರಕ್ಕೆ ಕ್ಯಾರೇ ಅನ್ನದ ಶಿಕ್ಷಣ ಇಲಾಖೆ ಅಧಿಕಾರಿಗಳು ಪವರ್ ಟಿವಿ ಮಾಡಿದ ನ್ಯೂಸ್ ಗೆ ಎಚ್ಚೆತ್ತುಕೊಂಡಿದೆ.
ಹೌದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇತ್ತು. ವಿದ್ಯಾರ್ಥಿನಿ ಪುಷ್ಪಾ, ಸಾರ್ ನಮ್ಮ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ದಯವಿಟ್ಟು ಶಿಕ್ಷಕರನ್ನು ನೀಡಿ ಅಂತ ಸಿಎಂ ಕುಮಾರಸ್ವಾಮಿ ಅವ್ರಿಗೆ ಪತ್ರ ಬರೆದಿದ್ದಳು. ಬಾಲಕಿಯ ಮನವಿಗೆ ಸ್ಪಂದಿಸಿದ ಸಿಎಂ, ಶಿಕ್ಷಕರನ್ನು ನೇಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಸಿಎಂ ಪತ್ರವನ್ನೇ ಲೆಕ್ಕಿಸದ ಅಧಿಕಾರಿಗಳು ಶಿಕ್ಷಕರನ್ನು ನೇಮಿಸಿರಲಿಲ್ಲ.
ನಿನ್ನೆ ಪವರ್ ಟಿವಿ ಬಾಲಕಿ ಸಿಎಂಗೆ ಬರೆದ ಪತ್ರ ಮತ್ತು ಸಿಎಂ ಬಾಲಕಿಗೆ ನೀಡಿದ ಭರವಸೆ ಬಗ್ಗೆ ನ್ಯೂಸ್ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಬಿಇಒ ಗಂಗಾಧರಯ್ಯ ವಿಜ್ಞಾನ ಶಿಕ್ಷಕಿಯೊಬ್ಬರನ್ನು ನೇಮಿಸಿದ್ದಾರೆ.
ತೋವಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ವತಃ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಈ ಶಾಲೆಯಲ್ಲಿ 240 ವಿದ್ಯಾರ್ಥಿಗಳಿದ್ದಾರೆ. ಆದರೆ, ಶಿಕ್ಷಕರು ಇಲ್ಲದೆ ಮಕ್ಕಳ ಕಲಿಕೆಗೆ ಬಹಳ ಸಮಸ್ಯೆ ಆಗುತ್ತಿತ್ತು. ಇವೆಲ್ಲದರ ಬಗ್ಗೆ ಪವರ್ ಟಿವಿ ವರದಿ ಮಾಡಿತ್ತು,
ಇಂದು ಬೆಳಗ್ಗೆ ಶಾಲೆ ಆರಂಭವಾಗೋ ಹೊತ್ತಿಗೆ ಗಣಿತ ಮತ್ತು ವಿಜ್ಞಾನ ವಿಭಾಗದ ಶಿಕ್ಷಕಿ ರಜಿನಿ ಅವರೊಂದಿಗೆ ಶಾಲೆಗೆ ಹಾಜರಾದ ಬಿಇಒ ಗಂಗಾಧರಯ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಚರ್ಚೆ ನಡೆಸಿದ್ರು..! ಸಿ ಎಂಗೆ ಪತ್ರ ಬರೆದ ವಿದ್ಯಾರ್ಥಿನಿಗೆ ಶಹಬಾಷ್ ಹೇಳಿದ್ರು.

RELATED ARTICLES

Related Articles

TRENDING ARTICLES