ಕರ್ನಾಟಕ ಮತ್ತು ಮುಂಬೈ ನಡುವಿನ ರಣಜಿ ಮ್ಯಾಚ್ ಡ್ರಾನಲ್ಲಿ ಅಂತ್ಯವಾಗಿದೆ. ಬೆಳಗಾವಿಯಲ್ಲಿ ನಡೆದ ಮ್ಯಾಚ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಗೋಪಾಲ್ ನಾಯಕತ್ವದ ಕರ್ನಾಟಕ, ಮೊದಲ ಇನ್ನಿಗ್ಸ್ ನಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ (161) ಅವರ ಅಮೋಘ ಶತಕದ ನೆರವಿನಿಂದ 400 ರನ್ ಮಾಡಿತು.
ಇದಕ್ಕೆ ಉತ್ತರವಾಗಿ ತನ್ನ ಇನ್ನಿಂಗ್ಸ್ ಆರಂಭಿಸಿದ ಧವಳ್ ಕುಲಕರ್ಣಿ ಸಾರಥ್ಯದ ಮುಂಬೈ 205 ರನ್ ಗಳಿಗೆ ಸರ್ವಪತನವಾಯಿತು.
ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 170 ರನ್ ಮಾಡಿತು. ಗುರಿ ಬೆನ್ನತ್ತಿದ ಮುಂಬೈ 4 ವಿಕೆಟ್ ನಷ್ಟಕ್ಕೆ 173ರನ್ ಗಳಿಸಿತು. ಅಂತಿಮವಾಗಿ ಪಂದ್ಯ ನೀರಸ ಡ್ರಾನಲ್ಲಿ ಮುಕ್ತಾಯವಾಯಿತು.
ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನ 28ರಂದುಮೈಸೂರಿನಲ್ಲಿ ಆಡಲಿದ್ದು, ಮಹಾರಾಷ್ಟ್ರವನ್ನು ಎದುರಿಸಲಿದೆ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕದ ಎರಡನೇ ಮ್ಯಾಚ್ ಇದಾಗಿತ್ತು. ವಿದರ್ಭ ನಡುವಿನ ಮೊದಲ ಪಂದ್ಯವೂ ಕೂಡ ಡ್ರಾ ಆಗಿತ್ತು.