ಸಚಿವ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಹೈಕಾಂಡ್ ಗೆ ಬಹಳ ಹತ್ತಿರವಾಗ್ತಿದ್ದಾರೆ. ಇಂದು ಡಿಕೆಶಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರು ತೆಲಂಗಾಣದಲ್ಲಿ ಸಾರ್ವಜನಿಕ ಸಭೆ ಮುಗಿಸಿ ಹೊರಡುವಾಗ ಡಿ,ಕೆ ಶಿವಕುಮಾರ್ ಅವರನ್ನು ಕರೆದು ಪ್ರತ್ಯೇಕವಾಗಿ ಕರೆದು ಮಾತಾಡಿದ್ದಾರೆ.
ಬೆಳಗ್ಗೆಯಷ್ಟೇ ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಸಮಾಧನ ಪಡಿಸಿದ್ದ ಡಿಕೆಶಿ ಬಳಿಕ ತೆಲಂಗಾಣಕ್ಕೆ ಹೋಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ರಸ್ತೆ ಬದಿ ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ ಇಬ್ಬರೇ ನಡೆಸಿದ ಮಾತುಕತೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಡಿ.ಕೆ ಶಿವಕುಮಾರ್ ಕರ್ನಾಟಕದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ಪ್ರಬಲ ನಾಯಕರಾಗಿ ಬೆಳೆಯುವ ಸೂಚನೆ ಸಿಕ್ಕಿದೆ.
https://www.facebook.com/powertvnews/videos/536049773540125/