Friday, September 20, 2024

ಧೋನಿ ಲವ್ ಸ್ಟೋರಿಗೆ ‘ಸಾಕ್ಷಿ’ ಉತ್ತಪ್ಪ..!

ಎಂ.ಎಸ್ ಧೋನಿ, ಕ್ರಿಕೆಟ್ ಲೋಕ ಕಂಡ ಒನ್ ಆಫ್ ದ ಬೆಸ್ಟ್​​ ಪ್ಲೇಯರ್​​. ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ 2 ವಿಶ್ವಕಪ್​, 1 ಚಾಂಪಿಯನ್ ಟ್ರೋಫಿ ಗೆಲ್ಲಿಸಿಕೊಟ್ಟ ಕೂಲ್​ ಕ್ಯಾಪ್ಟನ್​. ಯುವ ಕ್ರಿಕೆಟಿಗರ ರೋಲ್​ ಮಾಡೆಲ್, ವಿಶ್ವದ ಅಸಂಖ್ಯ ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗ. ಇಂತಿಪ್ಪ ಧೋನಿ ಇದೀಗ ಪ್ರೀತಿ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ.
ಅದೇನಪ್ಪಾ ಅಂದ್ರೆ, ಧೋನಿ ಲವ್ ಸ್ಟೋರಿಗೆ ‘ಸಾಕ್ಷಿ’ಯಾಗಿದ್ದು ಕನ್ನಡದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅನ್ನೋ ವಿಷ್ಯ ಇದೀಗ ಬಹಿರಂಗವಾಗಿದೆ.

https://www.instagram.com/p/Bqb7XzDFSxo/

ಟೀಮ್​ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಮದ್ವೆ ಆಗಿ 8 ವರ್ಷ ಕಳೆದಿದೆ. ಧೋನಿಯ ಲೈಫ್ ಸ್ಟೋರಿ, ಲವ್ ಸ್ಟೋರಿ ಸೇರಿದಂತೆ ಅನೇಕ ಇಂಟ್ರೆಸ್ಟಿಂಗ್ ವಿಷ್ಯಗಳು ನಿಮ್ಗೆ ಗೊತ್ತೇ ಇದೆ. ಇವರ ಬಯೋಪಿಕ್ ಕೂಡ ಬಂದಿದೆ. ಇದನ್ನು ಕೂಡ ನೀವು ನೋಡಿರ್ಬಹುದು. ಆದ್ರೆ, ಧೋನಿಯ ಲವ್ ಸ್ಟೋರಿ ಬಗ್ಗೆ ಇಷ್ಟು ದಿನ ಯಾರಿಗೂ ಗೊತ್ತಿಲ್ಲದ ಸಂಗತಿಯೊಂದು ಬಯಲಾಗಿದೆ.
ಇತ್ತೀಚೆಗೆ ಮುಂಬೈನಲ್ಲಿ ಸಾಕ್ಷಿ ಸಿಂಗ್ ಅವರ 30ನೇ ವರ್ಷದ ಬರ್ತ್ ಡೇಯನ್ನು ಧೋನಿ ಗ್ರ್ಯಾಂಡ್​ ಆಗಿ ಸೆಲಬ್ರೇಟ್​ ಮಾಡಿದ್ರು. ಕೆಲವೇ ಕೆಲವು ಮಂದಿ ಅತಿಥಿಗಳಿದ್ದ ಈ ಕಾರ್ಯಕ್ರಮದಲ್ಲಿ ಕ್ರಿಕೆಟಿಗರಾದ ಹಾರ್ಧಿಕ್​ ಪಾಂಡ್ಯ ಹಾಗೂ ಕೊಡಗಿನ ಕುವರ ರಾಬಿನ್​ ಉತ್ತಪ್ಪ ತಮ್ಮ ಪತ್ನಿ ಜೊತೆಯಲ್ಲಿ ಪಾಲ್ಗೊಂಡಿದ್ರು. ಕಾರ್ಯಕ್ರಮದ ಬಳಿಕ ಉತ್ತಪ್ಪ ದಂಪತಿ ಜೊತೆಗಿನ ಪೋಟೋವನ್ನ ತಮ್ಮ ಇನ್​ಸ್ಟಾದಲ್ಲಿ ಅಪ್ ಲೋಡ್ ಮಾಡಿರೋ ಸಾಕ್ಷಿ ‘ನನ್ನನ್ನು ಹಾಗೂ ಮಹಿಯನ್ನು ಒಂದಾಗಿಸಿದ ಇವರಿಗೆ ಧನ್ಯವಾದಗಳು, ನಿಮ್ಮನ್ನು ಭೇಟಿಯಾಗಿದ್ದು ಖುಷಿಕೊಟ್ಟಿದೆ’ ಅಂತ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES