Friday, April 19, 2024

ಟೀಮ್ ಇಂಡಿಯಾಕ್ಕೆ ಮತ್ತೆ ಕೈ ಕೊಟ್ಟ ವರುಣ..!

ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕೆ ಮಳೆ ಕೈ ಕೊಡುತ್ತಿದೆ. ಇಂದು ಮೇಲ್ಬೋರ್ನ್ ನಲ್ಲಿ ನಡೆಯಬೇಕಿದ್ದ 2ನೇ ಟಿ20 ಮ್ಯಾಚ್ ಗೆ ವರುಣ ಅಡ್ಡಿಪಡಿಸಿದ್ದಾನೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಅತಿಥೇಯ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿತು. ಆದರೆ, ವರುಣ ಸಂಪೂರ್ಣ ಆಟಕ್ಕೆ ಬಿಡಲಿಲ್ಲ. ಆಸೀಸ್ 19 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿರುವಾಗ ಮಳೆ ಕೈಕೊಟ್ಟಿತು.
ಎಡೆಬಿಡದೆ ಸುರಿದ ಮಳೆಯಿಂದಾಗಿ ಮೊದಲು ಭಾರತಕ್ಕೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 11 ಓವರ್‌ಗಳಲ್ಲಿ 90 ರನ್ ಟಾರ್ಗೆಟ್ ನೀಡಲಾಗಿತ್ತು. ನಂತರ ಮತ್ತೆ 5 ಓವರ್‌ಗಳಗೆ 46 ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಮತ್ತೆ ಮಳೆ ಆರ್ಭಟ ಶುರುವಾದ್ದರಿಂದ ಮ್ಯಾಚ್ ಅನ್ನು ರದ್ದು ಪಡಿಸಲಾಯಿತು. ಮೊದಲ ಮ್ಯಾಚ್ ಅನ್ನು ಸೋತಿದ್ದ ಭಾರತ ಈ ಮ್ಯಾಚ್ ಅನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, ಇದು ಸಾಧ್ಯ ಆಗಲಿಲ್ಲ.

ಮೊದಲ ಮ್ಯಾಚ್ ನಲ್ಲೂ ಭಾರತಕ್ಕೆ ಕೈ ಕೊಟ್ಟಿದ್ದು ಮಳೆಯೇ. ಆ ಮ್ಯಾಚ್ ನಲ್ಲೂ ಆಸೀಸ್ ಮೊದಲು ಬ್ಯಾಟಿಂಗ್ ಮಾಡಿತ್ತು. 16.1 ಓವರ್ ಆಗುವಷ್ಟರಲ್ಲಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಇದರಿಂದಾಗಿ 17 ಓವರ್ ಗಳಿಗೆ ಇನ್ನಿಂಗ್ಸ್ ಅನ್ನು ಸೀಮಿತಗೊಳಿಸಲಾಗಿತ್ತು. ನಿಗಧಿತ 17 ಓವರ್ ಗಳಲ್ಲಿ ಆಸೀಸ್ 158 ರನ್ ಗಳಿಸಿತ್ತು. ಡಕ್ ವರ್ತ್ ನಿಯಮದ ಪ್ರಕಾರ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನತ್ತಿದ ಭಾರತ 7 ವಿಕೆಟ್ ಕಳ್ಕೊಂಡು ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಯ್ತು.

RELATED ARTICLES

Related Articles

TRENDING ARTICLES