Wednesday, September 18, 2024

ವಿಮಾನವನ್ನೇ ಚೇಸ್ ಮಾಡಲು ಹೋದ ಮಹಿಳೆ..!

ಫ್ಲೈಟ್ ಮಿಸ್ ಆದಾಗ ಅದರ ಹಿಂದೆ ಓಡಿ ಚೇಸ್ ಮಾಡೋರನ್ನು ನೋಡಿದ್ದೀರಾ..? ಇದೇನ್ ಗುರು, ಬಸ್, ರೈಲು ಚೇಸ್ ಮಾಡೋರು ಇದ್ದೀವಿ..ನಾವು ಕೂಡ ಮಾಡಿದ್ದೀವಿ…ಮಾಡ್ತೀವಿ. ಆದ್ರೆ, ಫ್ಲೈಟ್ ಚೇಸ್ ಮಾಡೋದು ಸಾಧ್ಯವೇ..? ಸುಮ್ನೆ ಏನೇನೋ ಕಥೆ ಹೊಡಿಬೇಡಿ..! ಸಿನಿಮಾದಲ್ಲಿ ಕೂಡ ಇಂತಹದ್ದನ್ನು ತೋರಿಸಲ್ಲ ಅಂತಿದ್ದೀರಾ..?
ಆದ್ರೆ, ಇಲ್ಲೊರ್ವ ಮಹಿಳೆ ಫ್ಲೈಟ್ ಅನ್ನೇ ಚೇಸ್ ಮಾಡಲು ಹೋಗಿದ್ದಾಳೆ..! ಈ ವಿಚಿತ್ರ ನಡೆದಿರೋದು ಇಂಡೋನೇಷ್ಯಾದಲ್ಲಿ. ಇಂಡೋನೇಷ್ಯಾದ ಬಾಲಿಯ ನಗುರಾ ರೈ ವಿಮಾನ ನಿಲ್ದಾಣದಲ್ಲಿ ಹಾನಾ ಅನ್ನೋ ಮಹಿಳೆ ಫ್ಲೈಟ್ ಚೇಸ್ ಮಾಡೋ ಅಸಾಧ್ಯ ಸಾಹಸಕ್ಕೆ ಕೈ ಹಾಕಿದ್ರು..!
ಹನಾ ಅವರು ಸಿಟಿಲಿಂಕ್ ಫ್ಲೈಟ್ ನಲ್ಲಿ ಬಾಲಿಯಿಂದ ಜಕಾರ್ತಾಗೆ ಹೋಗಬೇಕಿತ್ತು. ಆದ್ರೆ, ಏರ್ ಪೋರ್ಟ್ ಗೆ ಬರೋದನ್ನು ತಡಮಾಡಿದ್ದಾರೆ. ವಿಮಾನ ಹೊರಡೋಕೆ ಹತ್ತು ನಿಮಿಷ ಇರುವಾಗ ಓಡಿ ಬಂದು ವಿಮಾನ ಚೇಸ್ ಮಾಡಲು ಪ್ರಯತ್ನ ಪಟ್ಟಿದ್ದಾಳೆ. ಅಷ್ಟರಲ್ಲಾಗಲೇ ವಿಮಾನ ಚಲಿಸಲಾರಂಭಿಸಿತ್ತು. ಭದ್ರತಾ ಸಿಬ್ಬಂದಿ ಆಕೆಯನ್ನು ಹಿಡಿದುಕೊಂಡಿದ್ದು, ರನ್ ವೇ ಬಳಿಯೇ ಹನಾ ಕುಸಿದು ಬಿದ್ದಿದ್ದಾರೆ.

RELATED ARTICLES

Related Articles

TRENDING ARTICLES