Friday, September 13, 2024

ವಿದ್ಯಾರ್ಥಿನಿಯ ಪತ್ರಕ್ಕೆ ಸಿಎಂ ಸ್ಪಂದನೆ -ಸಿಎಂ ಪತ್ರಕ್ಕೆ ಅಧಿಕಾರಿಗಳು ಡೋಂಟ್ ಕೇರ್..!

ತುಮಕೂರು : ವಿದ್ಯಾರ್ಥಿನಿಯ ಪತ್ರಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಆದ್ರೆ, ದೇವರು ಕೊಟ್ರೂ ಪೂಜಾರಿ ಕೊಡ್ಲಿಲ್ಲ ಅಂದಹಾಗೆ ಮುಖ್ಯಮಂತ್ರಿಗಳ ಪತ್ರಕ್ಕೆ ಅಧಿಕಾರಿಗಳೇ ಡೋಂಟ್ ಕೇರ್ ಅಂತಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಈ ಕೊರತೆ ನೀಗಿಸಲು ಪುಷ್ಪಾ ಅನ್ನೋ ವಿದ್ಯಾರ್ಥಿನಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾಳೆ. ವಿದ್ಯಾರ್ಥಿನಿ ಪುಷ್ಪಾಳ ಪತ್ರಕ್ಕೆ ಸ್ಪಂದಿಸಿ, ಶೀಘ್ರದಲ್ಲೇ ಶಿಕ್ಷಕರನ್ನು ನೇಮಕ ಮಾಡ್ತೀವಿ ಅಂತ ಪತ್ರ ಮುಖೇನ ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಗಮನಕ್ಕೆ ಈ ವಿಚಾರವನ್ನು ತರುವುದಾಗಿಯೂ ಹೇಳಲಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಸಿಎಂ ಪತ್ರಕ್ಕೆ ಕ್ಯಾರೇ ಅನ್ನುತ್ತಿಲ್ಲ. ಸಿಎಂ ಸೂಚನೆ ನೀಡಿದರೂ ಅಧಿಕಾರಿಗಳು ಬೇಜವಬ್ದಾರಿತನ ಮುಂದುವರೆಸಿದ್ದಾರೆ.
ಇನ್ನು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಕ್ಷೇತ್ರ ಕೊರಟಗೆರೆಯೇ ಅನ್ನೋದನ್ನು ಕೂಡ ಇಲ್ಲಿ ಗಮನಿಸಬೇಕಾಗುತ್ತೆ.

RELATED ARTICLES

Related Articles

TRENDING ARTICLES