Tuesday, June 18, 2024

ಫೈನಲ್​ಗೆ ಲಗ್ಗೆ ಇಟ್ಟ ಮೇರಿ ಕೋಮ್​

ಭಾರತದ ಅಗ್ರ ಗಣ್ಯ ಬಾಕ್ಸರ್ ಮೇರಿ ಕೋಮ್ ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ ಶಿಪ್​ನಲ್ಲಿ ಫೈನಲ್​ ಪ್ರವೇಶಿಸಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ ಪಂದ್ಯದಲ್ಲಿ 48 ಕೆಜಿ ವಿಭಾಗದ ಸೆಮಿಪೈನಲ್​ ನಲ್ಲಿ ನಾರ್ತ್​​ ಕೊರಿಯಾದ ಕಿಮ್ ಹೈಯಾಂಗ್​ ಮಿ ಅವರನ್ನು ಮಣಿಸಿ ಮೇರಿ ಕೋಮ್ ಅಂತಿಮ ಸುತ್ತನ್ನು ಪ್ರವೇಶಿಸಿದ್ದಾರೆ.

ಸೆಮಿಫೈನಲ್​ನಲ್ಲಿ ಜಯಭೇರಿ ಬಾರಿಸಿದ ಮೇರಿ ದಾಖಲೆಯ 6ನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 2010ರಲ್ಲಿ ಕಡೆಯ ಬಾರಿ ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಚಿನ್ನ ಜಯಸಿದ್ದರು. ಮೇರಿ ಕೋಮ್​ ಈಗಾಗಲೇ 5 ಚಿನ್ನದ ಪದಕ ಹಾಗೂ 1 ಬೆಳ್ಳಿಯ ಪದಕವನ್ನು ವಲ್ಡ್​​ ಚಾಂಪಿಯನ್​ ಶಿಪ್​ನಲ್ಲಿ ಜಯಸಿದ್ದಾರೆ.

RELATED ARTICLES

Related Articles

TRENDING ARTICLES