Saturday, September 14, 2024

ಸಿಎಂ ಸಾಹೆಬ್ರೇ ಆನೆ ದಾಳಿಯಿಂದ ಮುಕ್ತಿ ನೀಡಿ : ಬಾಲಕಿ ಮನವಿ

ಹಾಸನ : ಹಾಸನದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಇಂದು ಬೆಳಗ್ಗೆ ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಕಾಡಾನೆಯ ಪುಂಡಾಟಕ್ಕೆ ಭತ್ತದ ಗದ್ದೆ ಸಂಪೂರ್ಣವಾಗಿ ನಾಶವಾಗಿದೆ. ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಆನೆಯ ಕಾಟದಿಂದ ಕಂಗಾಲಾಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಆನೆಯ ಕಾಲ್ತುಳಿತಕ್ಕೆ ಮಣ್ಣಾಗಿದೆ. ಸಕಲೇಶಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಗಲು ವೇಳೆಯೇ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರೂ ಕೂಡಾ ಸ್ಥಳಕ್ಕೆ ಬಾರದೇ ಇದ್ದರಿಂದ ಗ್ರಾಮಸ್ಥರೇ ಒಂಟಿಸಲಗವನ್ನು ಕಾಡಿಗಟ್ಟುವ ಕೆಲಸ ಮಾಡುತ್ತಿದ್ದಾರೆ. ಗ್ರಾಮದೊಳಗೆ ಹಾಗೂ ಗ್ರಾಮದ ಅಕ್ಕಪಕ್ಕದ ಜಮೀನುಗಳಲ್ಲಿ ರಾಜಾರೋಷವಾಗಿ ಆನೆ ಓಡಾಡುತ್ತಿರುತ್ತವೆ. ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಒತ್ತಾಯಿಸ್ತಿದ್ದಾರೆ.
ಹೊಸಗದ್ದೆ ಗ್ರಾಮದ ಬಾಲಕಿ ವಿಸ್ಮಯ, ”ಸಿಎಂ ಕುಮಾರಸ್ವಾಮಿಯವರೇ ಸಕಲೇಶಪುರ ತಾಲೂಕಿನಾದ್ಯಂತ ಕಾಡಾನೆಗಳ ಸಮಸ್ಯೆ ಇದೆ, ನಮ್ಮ ಸಮಸ್ಯೆ ಪರಿಹಾರಕ್ಕೆ ಮುಂದಾಗಿ” ಅಂತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES