Wednesday, September 18, 2024

ಸ್ಯಾಂಡಲ್ ವುಡ್ ನ 84 ವರ್ಷದ ಚರಿತ್ರೆಯಲ್ಲಿ ಎಂದೂ ಬರೆಯದ ದಾಖಲೆ ನಿರ್ಮಾಣ..!

ಸ್ಯಾಂಡಲ್ ವುಡ್ ಗೆ 84 ವರ್ಷದ ಇತಿಹಾಸವಿದೆ. ಈ ಭವ್ಯ ಚರಿತ್ರೆಯಲ್ಲಿ ಎಂದೂ ಬರೆಯದ ದಾಖಲೆಯೊಂದು ಈ ಶುಕ್ರವಾರ ನಿರ್ಮಾಣವಾಗಲಿದೆ.
ಒಂದು ವರ್ಷದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳನ್ನು ಬಿಡುಗಡೆ ಮಾಡಿದ ದಾಖಲೆಯನ್ನು ಸ್ಯಾಂಡಲ್ ವುಡ್ ಬರೆಯಲಿದೆ. ಈ ವಾರ 10 ಸಿನಿಮಾಗಳು ರಿಲೀಸ್ ಆಗಲಿವೆ. ಜನವರಿಯಿಂದ ಇಲ್ಲಿಯವರೆಗೆ 193 ಸಿನಿಮಾಗಳು ರಿಲೀಸ್ ಆಗಿವೆ. ಈ ವಾರ 10 ಸಿನಿಮಾಗಳು ರಿಲೀಸ್ ಆಗಲಿವೆ. ಇದರೊಂದಿಗೆ 2018ರಲ್ಲಿ ಇದುವರೆಗೆ 204 ಸಿನಿಮಾಗಳು ರಿಲೀಸ್ ಆದಂತೆ ಆಗುತ್ತದೆ. ಈ ವರ್ಷದಲ್ಲಿನ್ನೂ 5 ಶ್ರುಕ್ರವಾರಗಳು ಬಾಕಿ ಇದ್ದು ಇನ್ನೂ ಒಂದಿಷ್ಟು ಸಿನಿಮಾಗಳು ರಿಲೀಸ್ ಆಗಲಿವೆ.
ಕನ್ನಡದ ಮೊಟ್ಟಮೊದಲ ಚಿತ್ರ ವೈ.ವಿ ರಾವ್ ನಿರ್ದೇಶನದ `ಸತಿ ಸುಲೋಚನ’ 1934 ಮಾರ್ಚ್ 3ರಂದು ರಿಲೀಸ್ ಆಗಿತ್ತು. 2015ರಲ್ಲಿ 136, 2016ರಲ್ಲಿ 173, 2017ರಲ್ಲಿ 180 ಚಿತ್ರಗಳು ರಿಲೀಸ್ ಆಗಿದ್ದವು.

RELATED ARTICLES

Related Articles

TRENDING ARTICLES