ಕಿಡಿಗೇಡಿಗಳ ಬ್ಲಾಕ್ ಮೇಲ್ ಗೆ ಬೇಸತ್ತು ಪ್ರೇಮಿಗಳು ವಿಷ ಸೇವಿಸಿದ್ದು, ಪ್ರಿಯಕರ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದ ಮಂಡಘಟ್ಟ ಗ್ರಾಮದ ನಿವಾಸಿ ಸಂಜಯ್ ಮತ್ತು ರಾಗಿಹೊಸಳ್ಳಿ ಗ್ರಾಮದ ಕೀರ್ತಿ ಪ್ರೇ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಸಹ ಪರಸ್ಪರ ಜೊತೆಯಲ್ಲಿ ಓಡಾಡಿದ ಹಾಗೂ ಸಲುಗೆಯಿಂದ ಇದ್ದ ವಿಡಿಯೋ ಹಾಗೂ ಚಿತ್ರಗಳು ಆಯನೂರಿನ ಕೆಲವು ಕಿಡಿಗೇಡಿಗಳ ಕೈಗೆ ಸಿಕ್ಕಿವೆ. ಸುಮಾರು, ಒಂದು ಲಕ್ಷ ರೂ. ಹಣ ಬೇಡಿಕೆ ಇಟ್ಟಿದ್ದ ಕಿಡಿಗೇಡಿಗಳು ಹಣ ನೀಡದಿದ್ದರೆ ಸಲುಗೆಯಿಂದ ಇದ್ದ ವಿಡಿಯೋ ಮತ್ತು ಚಿತ್ರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರೇಮಿಗಳನ್ನ ಬ್ಲಾಕ್ ಮೇಲ್ ಮಾಡಿದ್ದರು ಎನ್ನಲಾಗಿದೆ. ಈ ಬ್ಲಾಕ್ ಮೇಲ್ ಗೆ ಬೇಸತ್ತ ಸಂಜಯ್ ಮತ್ತು ಕೀರ್ತಿ ನ. 19 ರಂದು ವಿಷ ಸೇವಿಸಿದ್ದರು. ಆದರೆ, ಅದೃಷ್ಟವಶಾತ್ ಕೀರ್ತಿ ಬದುಕಿ ಉಳಿದಿದ್ದು, ದುರ್ದೈವ ಎಂದರೆ ಸಂಜಯ್ ಇಂದು ಬೆಳಿಗ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಪ್ರಕರಣ ಸಂಬಂಧ ಕುಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ