ಕಾಂಗರೂ ನಾಡಿನಲ್ಲಿ ಟೀಮ್ಇಂಡಿಯಾದ ಹೋರಾಟ ಇಂದಿನಿಂದ ಆರಂಭವಾಗಲಿದೆ. ಗೆಲುವಿನ ಮೂಲಕ ಆಸೀಸ್ ಪ್ರವಾಸವನ್ನ ಶುಭಾರಂಭ ಮಾಡಲು ಬ್ಲೂ ಬಾಯ್ಸ್ ಸಜ್ಜಾಗಿದ್ದಾರೆ. ಗಬ್ಬಾ ಸ್ಟೇಡಿಯಂ ನಲ್ಲಿ ಮೊದಲ ಮ್ಯಾಚ್ ಗೆ ನಡೆಯಲಿದ್ದು, ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿರುವ ಇತ್ತಂಡಗಳು ರನ್ ಹೊಳೆ ಹರಿಸಲು ತುದಿಗಾಲಿನಲ್ಲಿ ನಿಂತಿವೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆಯ್ಕೆಮಾಡಿಕೊಂಡು ಅತಿಥೇಯರನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ, ಶಿಖರ್ ಧವನ್, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ ಆಸೀಸ್ ವಿರುದ್ಧ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಆಸೀಸ್ ನ ಪಿಚ್ ಗಳು ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತವೆ. ಆದ್ದರಿಂದ ಭುವನೇಶ್ವರ್ ಕುಮಾರ್,ಜಸ್ಪ್ರೀತ್ ಬೂಮ್ರಾ,ಖಲೀಲ್ ಅಹ್ಮದ್ ಮೇಲೆ ನಿರೀಕ್ಷೆ ಹೆಚ್ಚಿದೆ.
ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧ ಶಿಕ್ಷೆ ಅನುಭವಿಸುತ್ತಿರುವ ಆಸೀಸ್ ಅನುಭವಿ ಆಟಗಾರರಾದ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್, ಕ್ಯಾಮರೂನ್ ಬೆನ್ ಕ್ರಾಫ್ಟ್ ಈ ಸರಣಿಯಲ್ಲಿ ಆಡುತ್ತಿಲ್ಲ. ಇದು ವಿರಾಟ್ ಕೊಹ್ಲಿ ಪಡೆಗೆ ಪ್ಲಸ್ ಪಾಯಿಂಟ್ ಆದ್ರೂ ಮೈ ಮರೆಯುವಂತಿಲ್ಲ. ಮೇಲ್ನೊಟಕ್ಕೆ ಕಾಂಗರೂ ಪಡೆ ಬಲಕಳೆದುಕೊಂಡಂತೆ ಕಂಡರೂ ಯುವ ತಂಡ ಯಾವ ಕ್ಷಣದಲ್ಲಾದರೂ ಅಬ್ಬರಿಸಬಹುದು.
ಅತಿಥೇಯ ತಂಡದಲ್ಲಿ ನಾಯಕ ಅ್ಯರೋನ್ ಫಿಂಚ್, ಗ್ಲೇನ್ ಮ್ಯಾಕ್ಸ್ ವೆಲ್, ಕ್ರಿಸ್ ಲಿನ್,ಡಾರ್ಚಿ ಶಾರ್ಟ್ ಟಿ20 ಸ್ಪೆಷಲಿಷ್ಟ್ ಬ್ಯಾಟ್ಸಮನ್ ಗಳಾಗಿದ್ದಾರೆ. ಜೊತೆಗೆ ನಾಥಾನ್ ಕೌಲ್ಟರ್ ನೈಲ್, ಅ್ಯಂಡ್ರೊ ಟೈ, ಅ್ಯಡಮ್ ಜಂಪಾ, ಬಿಲ್ಲಿ ಸ್ಟಾನ್ ಲೇಕ್ ಬೌಲಿಂಗ್ ವಿಭಾಗದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
ಉಭಯ ತಂಡಗಳು ಟಿ-೨೦ ಮಾದರಿಯಲ್ಲಿ ಒಟ್ಟು 15 ಬಾರಿ ಮುಖಾಮುಖಿಯಾಗಿವೆ. ಭಾರತ 10 ಪಂದ್ಯಗಳಲ್ಲಿ ಜಯಸಿದ್ರೆ, 5 ಪಂದ್ಯಗಳಲ್ಲಿ ಆಸೀಸ್ ಪಡೆ ಗೆದ್ದಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಕಾಂಗರೂ ನಾಡಿನಲ್ಲಿ ಆಡಿದ 6 ಪಂದ್ಯಗಳಲ್ಲಿ 4 ಮ್ಯಾಚ್ಗಳನ್ನ ಭಾರತ ಜಯಸಿದೆ.
ವಿದೇಶಿ ಪ್ರವಾಸದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುವ ಬಲಿಷ್ಠ ತಂಡವೆನ್ನಲು ಸಾಧ್ಯವಿಲ್ಲ. ಈ ವರ್ಷ ಇಂಗ್ಲೆಂಡ್ ಪ್ರವಾಸದ ಸರಣಿಯಲ್ಲಿ ಟೀಮ್ ಇಂಡಿಯಾ ಎಡವಿತ್ತು. ಇಂಗ್ಲೆಂಡ್ ನೆಲದಲ್ಲಿ ಚುಟುಕು ಸರಣಿ ಜಯಸಿದ್ದ ಟೀಮ್ಇಂಡಿಯಾ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಸೋತಿತ್ತು. ಸದ್ಯ ವೆಸ್ಟ್ಇಂಡೀಸ್ ವಿರುದ್ಧದ ಎಲ್ಲಾ ಮಾದರಿಯ ಸರಣಿಯನ್ನು ಗೆದ್ದಿರೋ ಕೊಹ್ಲಿ ಪಡೆ ಆಸೀಸ್ ವಿರುದ್ಧವೂ ಗೆಲ್ಲುವ ವಿಶ್ವಾಸದಲ್ಲಿದೆ.