ಆಸ್ಟ್ರೇಲಿಯಾ ಪ್ರವಾಸವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಸೋಲಿನೊಂದಿಗೆ ಆರಂಭಿಸಿದೆ. ಇಂದು ಬ್ರಿಸ್ಬ್ರೆನ್ ನಲ್ಲಿ ನಡೆದ ಮೊದಲ ಟಿ20 ಮ್ಯಾಚ್ ನಲ್ಲಿ ಭಾರತ 4 ರನ್ ಗಳಿಂದ ಸೋಲನುಭವಿಸಿದ್ದು, ಆ್ಯರೋನ್ ಪಿಂಚ್ ನಾಯಕತ್ವದ ಆಸೀಸ್ ವಿರೋಚಿತ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಭಾರತ ಅತಿಥೇಯರನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 16.1 ಓವರ್ ಆಗುವಷ್ಟರಲ್ಲಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಇದರಿಂದಾಗಿ 17 ಓವರ್ ಗಳಿಗೆ ಇನ್ನಿಂಗ್ಸ್ ಅನ್ನು ಸೀಮಿತಗೊಳಿಸಲಾಯಿತು. ನಿಗಧಿತ 17 ಓವರ್ ಗಳಲ್ಲಿ ಆಸೀಸ್ 158 ರನ್ ಗಳಿಸಿತು. ಡಕ್ ವರ್ತ್ ನಿಯಮದ ಪ್ರಕಾರ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಗುರಿ ನೀಡಲಾಯಿತು.
ಗುರಿ ಬೆನ್ನತ್ತಿದ ಭಾರತ 7 ವಿಕೆಟ್ ಕಳ್ಕೊಂಡು ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಯಿತು. ಓಪನರ್ ಶಿಖರ್ ಧವನ್ (76) ಹಾಫ್ ಸೆಂಚುರಿ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ವಿಫಲರಾದರು.