ಉಗ್ರರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಿ ಅಂತ ಅಮೆರಿಕ ಪಾಕಿಸ್ತಾನಕ್ಕೆ ಪದೇ ಪದೇ ಎಚ್ಚರಿಕೆ ನೀಡ್ತಿದ್ದ ಅಮೆರಿಕ ಈಗ ಸರಿಯಾದ ಪಾಠವೊಂದನ್ನು ಕಲಿಸಿದೆ..! ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು ಪಾಕಿಸ್ತಾನಕ್ಕೆ ನೀಡ್ತಿದ್ದ ಭದ್ರತಾ ನೆರವನ್ನು ಸ್ಥಗಿತಗೊಳಿಸಿದೆ.
ಪಾಕಿಸ್ತಾನಕ್ಕೆ ರಕ್ಷಣಾ ನೆರವು ಅಂತ ಅಮೆರಿಕಾ ಸರ್ಕಾರ ಸುಮಾರು 1.66 ಬಿಲಿಯನ್ ಡಾಲರ್ ನೀಡ್ತಾ ಇತ್ತು. ಇದನ್ನೀಗ ನೀಡದಿರಲು ತೀರ್ಮಾನಿಸಿದೆ. ಟ್ರಂಪ್ ಅವರ ಆದೇಶದ ಮೇರೆಗೆ ಪಾಕ್ ಗೆ ಭದ್ರತಾ ನೆರವನ್ನು ಸ್ಥಗಿತಗೊಳಿಸಿದ್ದೇವೆ ಅಂತ ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ತಿಳಿಸಿದ್ದಾರೆ.
”ಏಷ್ಯಾದಲ್ಲಿ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಪಾಕ್ ಸರ್ಕಾರಕ್ಕೆ ಒಬಮಾ ಅವರ ಅಧಿಕಾರದ ಅವಧಿಯಲ್ಲೇ ಅಮೆರಿಕಾ ನಿರ್ದೇಶನ ನೀಡಿತ್ತು. ಆಗ ಪಾಕ್ ಸಮ್ಮತಿಯನ್ನೂ ನೀಡಿತ್ತು. ಆದ್ರೆ, ಇಲ್ಲಿಯವರೆಗೂ ಪಾಕ್ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದಾಗಿ ಭದ್ರತಾ ನೆರವನ್ನು ಸ್ಥಗಿತಗೊಳಿಸಲಾಗಿದೆ ಅಂತ ಅಮೆರಿಕ ರಕ್ಷಣಾ ಇಲಾಖೆ ಸಹಾಯಕ ಕಾರ್ಯದರ್ಶಿ ಡೇವಿಡ್ ಸಿಡ್ನಿ ತಿಳಿಸಿದ್ದಾರೆ.