Saturday, April 20, 2024

ಬ್ಯಾಟಿಂಗ್ ನಲ್ಲೂ ಅಬ್ಬರಿಸಲಿದ್ದಾರೆ ಬೌಲರ್ ಗಳು..!

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ನಾಳೆಯಿಂದ ಟಿ20 ಸರಣಿ ಶುರು. ಅದಾದ ಬಳಿಕ ಟೆಸ್ಟ್ ಮತ್ತು ಒಡಿಐ ನಡೆಯಲಿದೆ.
ಆಸೀಸ್ ವಿರುದ್ಧ ಅವರ ನೆಲದಲ್ಲಿ ಟಿ20, ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದು ಬರಲೇ ಬೇಕೆಂದು ಪಣತೊಟ್ಟಿರೋ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸ್ತಾ ಇದೆ.
ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸೋಕೆ ಬೌಲರ್ ಗಳು ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕಡೆಗೂ ಅಷ್ಟೇ ಗಮನ ಕೊಡ್ತಿದ್ದಾರೆ.
ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಜೆಸ್ಪ್ರಿತ್ ಬುಮ್ರಾ ಬ್ಯಾಟಿಂಗ್ ಪ್ರಾಕ್ಟಿಸ್ ಮಾಡ್ತಿದ್ದಾರೆ. ಬ್ರಮ್ರಾ ಬ್ಯಾಟಿಂಗ್ ಅಭ್ಯಾಸ ಮಾಡ್ತಿರೋ ವೀಡಿಯೋವನ್ನು ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಬ್ಯಾಟ್ಸ್ ಮನ್ ಗಳು ಕೈಕೊಟ್ಟರೆ ಕೆಳಕ್ರಮಾಂಕದ ಬ್ಯಾಟ್ಸ್ ಮನ್ ಗಳು ಗೆಲುವಿನ ದಡ ಸೇರಿಸಲು ರೆಡಿ ಆಗಿರ್ಬೇಕು ಅಂತ ಬೌಲರ್ ಗಳು ಬ್ಯಾಟಿಂಗ್ ಪ್ರಾಕ್ಟಿಸ್ ಮಾಡ್ತಿದ್ದಾರೆ.

https://www.instagram.com/p/BqWvYLoBqKI/?utm_source=ig_embed&utm_campaign=embed_video_watch_again

RELATED ARTICLES

Related Articles

TRENDING ARTICLES