1984ರಲ್ಲಿ ನಡೆದ ಸಿಖ್ ವಿರೋಧಿ ಹತ್ಯಾಕಾಂಡಕ್ಕೆ ಸಂಬಂಧಪಟ್ಟಂತೆ ನವದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಇಬ್ಬರು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದೆ.
ಇಂದಿರಾಗಾಂಧಿ ಹತ್ಯೆಯ ಬಳಿಕ ಸಿಖ್ ವಿರೋಧಿ ಗಲಭೆ ನಡೆದಿತ್ತು. ಆಗ ಅನೇಕ ಸಿಖ್ಖರ ಹತ್ಯೆ ನಡೆದಿತ್ತು. ಅಷ್ಟೇ ಅಲ್ಲದೆ ಕೆಲವು ಸಿಖ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸಿಖ್ಖರ ಆಸ್ತಿ-ಪಾಸ್ತಿಗಳನ್ನು ಕೂಡ ಹಾಳು ಮಾಡಲಾಗಿತ್ತು. ಅಂದಿನ ಕಾಂಗ್ರೆಸ್ ನಾಯಕರಾದ ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್ ಅವರ ಕೈವಾಡವಿದೆ ಅನ್ನೋ ಆರೋಪ ಬಲವಾಗಿ ಕೇಳಿಬಂದಿತ್ತು.
ಇನ್ನು ಈ ಗಲಭೆ ಬಗ್ಗೆ ಇಷ್ಟೆಲ್ಲಾ ಸಾವು ನೋವು ಸಂಭವಿಸಿದ್ದರೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು “ದೊಡ್ಡ ಆಲದ ಮರ ಬಿದ್ದಾಗ ಅದರಡಿ ಇರೋ ಚಿಕ್ಕಪುಟ್ಟ ಸಸಿಗಳು ನಾಶವಾಗೋದು ಸಹಜ” ಅಂತ ಸ್ಟೇಟ್ಮೆಂಟ್ ಕೊಟ್ಟಿದ್ರು. ಈ ಘಟನೆಗೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಂಗ್ರೆಸ್ ಪರ ಕ್ಷೇಮೆ ಕೇಳಿದ್ದಾರೆ. ಆದ್ರೆ, ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿ ಕ್ಷಮೆ ಕೇಳೇ ಇಲ್ಲ..! ರಾಹುಲ್ ಆಗ ಬಾಲಕ, ಅವರೇಕೆ ಇಂದು ಕ್ಷಮೆ ಕೇಳ್ಬೇಕು ಅನ್ನೋದು ಕೆಲವು ಕಾಂಗ್ರೆಸಿಗರ ಪ್ರಶ್ನೆಯಾಗಿದೆ. .
ಈ ಗಲಭೆ ಸಂದರ್ಭದಲ್ಲಿ ಇಬ್ಬರು ಸಿಖ್ಖರನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯಶ್ ಪಾಲ್ ಮತ್ತು ನರೇಶ್ ಎಂಬ ಇಬ್ಬರಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಇವರಿಬ್ಬರು ದೆಹಲಿಯ ಮಹಿಪಾಲ್ಪುರದಲ್ಲಿ ಹರ್ದೇವ್ ಸಿಂಗ್ ಮತ್ತು ಅವತಾರ್ ಸಿಂಗ್ ಅನ್ನೋರ ಕೊಲೆ ಮಾಡಿದ್ರು. 2015ರಲ್ಲಿ ಎಸ್ ಐಟಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಇದೇ ನವೆಂಬರ್15ರಂದು ಯಶ್ ಪಾಲ್ ಮತ್ತು ನರೇಶ್ ಆರೋಪ ಸಾಬೀತಾಗಿತ್ತು. ಇಂದು ಶಿಕ್ಷೆ ಪ್ರಕಟವಾಗಿದೆ. ಯಶ್ ಪಾಲ್ ಸಿಂಗ್ ಗೆ ಗಲ್ಲು ಹಾಗೂ ನರೇಶ್ ಗೆ ಶೆರಾವತ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಪಟಿಯಾಲ ಕೋರ್ಟ್ ತೀರ್ಪಿತ್ತಿದೆ.