Wednesday, September 18, 2024

ಕೊಲೆ ಪ್ರಕರರಣದ ಆರೋಪಿಗಳ ಮೇಲೆ ಫೈರಿಂಗ್..!

ರಾಮನಗರ : ರಾಜ್ಯ ಜೆಡಿಎಸ್ ಎಸ್ ಸಿ, ಎಸ್ ಟಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜಗೋಪಾಲ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಕನಕಪುರದಲ್ಲಿ ನಡೆದಿದೆ.
ಕನಕಪುರ ಇನ್ಸ್ ಪೆಕ್ಟರ್ ಮಲ್ಲೇಶ್ ಹಾಗೂ ಸಬ್ ಇನ್ಸ್ ಪೆಕ್ಟರ್ ಅನಂತ್ ರಾಮು ಅವರು ಆರೋಪಿಗಳ ಮೇಲೆ ಫೈರಿಂಗ್ ನಡೆಸಿರೋ ಪೊಲೀಸರು. ರಾಮ(21) ಮತ್ತು ದೀಪು(27) ಅನ್ನೋ ಆರೋಪಿಗಳು ಗುಂಡೇಟು ತಿಂದವರು.
ನವೆಂಬರ್ 11ರ ಸಂಜೆ 7ಗಂಟೆ ಸುಮಾರಿಗೆ ಕನಕಪುರದಲ್ಲಿ ರಾಜಗೋಪಾಲ್ ಅವರ ಕೊಲೆ ನಡೆದಿತ್ತು. ದುಷ್ಕರ್ಮಿಗಳು ನಗರದ ಹಳೆ ಪೊಲೀಸ್ ಠಾಣೆ ರಸ್ತೆ ಮುಸ್ಲೀಂ ಬ್ಲಾಕ್ ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ, ಡ್ಯಾಗರ್ ನಿಂದ ಇರಿದು ಕೊಲೆ ಮಾಡಲಾಗಿತ್ತು. ಆರೋಪಿಗಳು ತಲೆಮರೆಸಿಕೊಂಡಿದ್ರು. ಇಂದು ಬೆಳಗಿನ ಜಾವ ಅರೆಸ್ಟ್ ಮಾಡುವ ವೇಳೆ ಆರೋಪಿಗಳಾದ ರಾಮು ಮತ್ತು ದೀಪು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ಮಲ್ಲೇಶ್ ಮತ್ತು ಎಸ್ ಐ ಅನಂತ್ ಕುಮಾರ್ ಫೈರಿಂಗ್ ನಡೆಸಿದ್ದಾರೆ. ರಾಮು ಬಲಗಾಲಿಗೆ ಹಾಗೂ ದೀಪು ಎಡಗಾಲಿಗೆ ಗುಂಡೇಟು ಬಿದ್ದಿದೆ. ಗಾಯಾಳುಗಳನ್ನು ಕನಕಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES