ಕೊಪ್ಪಳ : ಕನಕಗಿರಿ ಶಾಸಕ ಬಸವರಾಜ್ ದಡೆಸುಗುರು ಅಂಗನವಾಡಿ ಆಹಾರಕ್ಕೆ ಕನ್ನ ಹಾಕಿದ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿಗಳಿಗೆ ಶಾಸಕರು ಬರೆದ ಪತ್ರದಲ್ಲಿ ಅವರ ಬಣ್ಣ ಬಯಲಾಗಿದೆ..!
ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರಬರೆದ ಬಸವರಾಜ್ ದಡೆಸುಗುರು, ತಮಗೆ ಬೇಕಾದವರಿಗೆ ಟೆಂಡರ್ ನೀಡುವಂತೆ ತಿಳಿಸಿದ್ದಾರೆ. ಫುಡ್ ಸಪ್ಲೇ ಮಾಡೋ ಟೆಂಡರ್ ಅನ್ನು ನಮ್ಮವರಿಗೆ ಕೊಡಿ ಅಂತ ಶಾಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಶಾಸಕರ ಹಠದಿಂದಾಗಿ ಕಳೆದ ಒಂದು ತಿಂಗಳಿಂದ ಅಂಗನವಾಡಿಗಳಿಗೆ ಆಹಾರ ಪೂರೈಕೆ ಆಗ್ತಿಲ್ಲ.
”ಎಂ.ಎಸ್.ಟಿ.ಪಿ.ಸಿ ಗೆ ಆಹಾರ ಸರಬರಾಜು ಮಾಡುತ್ತಿದ್ದ ಅರ್ಜುನ್ ಟ್ರೇಡರ್ಸ್ ಅವರು ಆಹಾರ ಪೂರೈಕೆ ಮಾಡ್ತಿದ್ದು, ಆಹಾರ ಪೂರೈಕೆಯಲ್ಲಿ ಲೋಪದೋಷಗಳಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಮರೇಶ್ವರ್ ಏಜೆನ್ಸೀಸ್ ಗೆ ಟೆಂಡರ್ ಕೊಡಿ, ಅವರು ನಮಗೆ ಚಿರಪರಿಚಿತರು ಮತ್ತು ಬೇಕಾದವರಾಗಿದ್ದಾರೆ” ಅಂತ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.