Thursday, May 30, 2024

ಅಸಹಾಯಕರಿಗೆ ಆಸರೆಯಾದ ‘ಕಿಕ್ ಸ್ಟಾರ್ಟ್’..!

ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಹತ್ತು ನಿಮಿಷ ಮನೆಯೊಳಗೆ ಕೂರುವುದು ಕಷ್ಟದ ಮಾತೇ ಸರಿ. ವಯಸ್ಸು ಎಷ್ಟು ಬೇಕಾದ್ರೂ ಆಗಿರಲಿ, ಸಿಲಿಕಾನ್​ ಸಿಟಿಯ ಲೈಫ್​ಗೆ ಅಡ್ಜಸ್ಟ್​ ಆಗಬೇಕಾದ್ರೆ ತಿರುಗಾಡಲೇಬೇಕಾಗುತ್ತೆ. ಆರೋಗ್ಯವಾಗಿದ್ದವರು, ಕೈಕಾಲು ಚೆನ್ನಾಗಿದ್ದವರು ಹೊರಗೆ ಆರಾಮಾಗಿ ಓಡಾಡಿಕೊಂಡಿರ್ತಾರೆ. ಆದ್ರೆ , ವಯಸ್ಸಾದವರು, ದುರ್ಬಲವಾದವರ, ಅಸಹಾಯಕರ ಕಥೆ ಏನು..?
ಹೌದು.. ವಯಸ್ಸಾದವರು ಅಥವಾ ದೈಹಿಕವಾಗಿ ದುಬರ್ಲರಾದವರು ಹೇಗೆ ಹೊರಗೆ ಸುತ್ತಾಡುತ್ತಾರೆ ಅಲ್ವಾ..? ಅವರಿಗೂ ಎಲ್ಲಾ ರೀತಿಯ ಆಸೆ ಆಕಾಂಕ್ಷೆಗಳಿರುತ್ತೆ. ಅಂತವರಿಗಾಗಿಯೇ ಸಿಲಿಕಾನ್‌ಸಿಟಿ ಬೆಂಗಳೂರಿನಲ್ಲಿ ಒಂದು ಕ್ಯಾಬ್‌ಸಂಸ್ಥೆ ಆರಂಭವಾಗಿದೆ. ಅದಕ್ಕೆ ಕಿಕ್​ಸ್ಟಾರ್ಟ್ ಕ್ಯಾಬ್ ಅಂತ ಹೆಸರಿಡಲಾಗಿದೆ. ಈ ಕಿಕ್​ಸ್ಟಾರ್ಟ್ ಕ್ಯಾಬ್ ಮೂಲಕ ಅಶಕ್ತರನ್ನು, ತೀರಾ ವಯಸ್ಸಾಗಿ ನಡೆಯಲಾಗದವರನ್ನು, ಆಪರೇಷನ್‌ ಆದವರನ್ನು ಎಲ್ಲರಂತೆ ಓಡಾಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ದೈಹಿಕ ದುರ್ಬಲರಿಗಾಗಿ ಕ್ಯಾಬ್​ಗಳು ರೋಡಿಗಿಳಿದಿವೆ. ಆಯಾಸವಿಲ್ಲದೆ ದೈಹಿಕ ದುರ್ಬಲರು ಇದರಲ್ಲಿ ಪ್ರಯಾಣಿಸಬಹುದು. ಒಂದೂ ಹೆಜ್ಜೆ ಇಡಲಾಗದವರು, ನಾಲ್ಕು ಗೋಡೆ ನಡುವೆ ನಮ್ಮ ಬದುಕು ಎಂದು ಈಗಾಗಲೇ ಡಿಸೈಡ್ ಮಾಡಿದವರು ಈ ಕ್ಯಾಬ್‌ಏರಿದರೆ,  ಹೊರ ಜಗತ್ತನ್ನೊಮ್ಮೆ ಸುತ್ತಾಡಿ ಬರಬಹುದು.

ವಯಸ್ಸಾದವರಿಗೆ ಮತ್ತು ದೈಹಿಕವಾಗಿ ದುರ್ಬಲಕವಾದವರಿಗೆ, ವ್ಹೀಲ್ ಚೇರ್ ನಲ್ಲೇ ಕಾಲ ಕಳೆಯಬೇಕಾದವರು ಸಮಯ ಕಳೆಯಲು ಮತ್ತು ಮನಸ್ಸಿನ ನೆಮ್ಮದಿ ಪಡೆಯಲು ಕ್ಯಾಬ್​ ಹತ್ತಿದರೆ ಸಾಕು.
ಈ ಕಿಕ್​ಸ್ಟಾರ್ಟ್ ಕ್ಯಾಬ್ ಓಲಾ, ಉಬರ್​ನಂತೆ ಕೆಲಸ ಮಾಡುತ್ತೆ. ಆದರೆ ಈ ಟ್ಯಾಕ್ಸಿ ಸೇವೆ ಎಲ್ಲರಿಗೂ ಸಿಗುವುದಿಲ್ಲ. ವಯಸ್ಸಾಗಿ ಹೆಜ್ಜೆ ಇಡೋದಕ್ಕೂ ಕಷ್ಟಪಡುವವರಿಗೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟು ನೋವು ಅನುಭವಿಸುವವರಿಗೆ ತೀರಾ ದೈಹಿಕ ದುರ್ಬಲರಿಗೆ ಮಾತ್ರ ಈ ಕಿಕ್​ಸ್ಟಾರ್ಟ್ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತೆ.

ಈ ಕ್ಯಾಬ್​​ನಲ್ಲಿ ಡ್ರೈವರ್ ಪಕ್ಕದ ಮತ್ತು ಹಿಂಬದಿಯ ಸೀಟುಗಳು ಇಲ್ಲಿ ಮಾಮೂಲಿಯಂತೆ ಇಲ್ಲ. ಅಡ್ಜಸ್ಟಬಲ್ ಸೀಟುಗಳು. ಈ ಸೀಟ್​ಗಳನ್ನು ವಯಸ್ಸಾದವರು ಮತ್ತು ಅಶಕ್ತರು ಅಥವಾ ಪ್ರಯಾಣಿಕರು ಹೇಗೆ ಬೇಕಾದರೂ ಫೋಲ್ಡ್ ಮಾಡಬಹುದು. ದೈಹಿಕ ನ್ಯೂನತೆ ಇರುವ ವ್ಯಕ್ತಿಗೆ ಕಾರೊಳಗೆ ಬಂದು ಕುಳಿತುಕೊಳ್ಳಲಾಗದಿದ್ದರೆ, ಕ್ಯಾಬ್ ನ ಸೀಟನ್ನೇ ಹೊರಗೆಳೆದು, ಅವರನ್ನು ಕೂರಿಸಿಕೊಂಡು, ಪುನಃ ಯಥಾಸ್ಥಿತಿಗೆ ಅಡ್ಜಸ್ಟ್ ಮಾಡಬಹುದು. ಹಂಪ್ ಬಂದಾಗ,ಡ್ರೈವರ್ ಬ್ರೇಕ್ ಒತ್ತಿದಾಗ ಒಳಗಿರುವ ಪ್ರಯಾಣಿಕರು ಹೆದರಿಕೊಳ್ಳೋ ಅವಶ್ಯಕತೆಯೇ ಇರೋದಿಲ್ಲ. ಅಷ್ಟು ಕಂಫರ್ಟ್ ಫೀಲ್ ಕೊಡುತ್ತೆ. ಒಟ್ಟಾರೆಯಾಗಿ ಮನೆಯಲ್ಲಿಯೇ ಕೂತು ಕೂತು ಬೇಸರವಾದವರಿಗೆ ಈ ಸಂಸ್ಥೆಯಿಂದ ಅನುಕೂಲವಾಗಿದೆ ಅಂದ್ರೆ ಅತಿಶಯೋಕ್ತಿ ಅಲ್ಲ.

RELATED ARTICLES

Related Articles

TRENDING ARTICLES