ರಿಯಾಲಿಟಿ ಸ್ಟಾರ್ ಸುನಾವಿ ಕಿಟ್ಟಿ ಪದೇ ಪದೇ ಕಿರಿಕ್ ಮಾಡಿಕೊಂಡೇ ಸುದ್ದಿಯಲ್ಲಿರ್ತಾರೆ. ಈಗ ಮನೆ ಬಾಡಿಗೆ ಕೇಳಿದಕ್ಕೆ ಓನರ್ ಗೆ ಅವಾಜ್ ಹಾಕಿ ಮತ್ತೆ ಸುದ್ದಿಯಾಗಿದ್ದಾರೆ. ಶಂಕರಮಠ ಬಳಿ ವಾಸವಿರೋ ಕಿಟ್ಟಿ ಕಳೆದ 4 ತಿಂಗಳಿಂದ ಮನೆ ಬಾಡಿಗೆ ಕಟ್ಟೇ ಇಲ್ವಂತೆ..! ತಿಂಗಳಿಗೆ 22 ಸಾವಿರ ಬಾಡಿಗೆ ಇದ್ದು 4 ತಿಂಗಳಿಂದ ಸುಮಾರು 82 ಸಾವಿರ ಬಾಕಿ ಇಟ್ಟುಕೊಂಡಿದ್ದಾರಂತೆ..!
ಶನಿವಾರ ಮನೆ ಮಾಲೀಕ ಶಿವಣ್ಣ ಬಾಡಿಗೆ ಕೇಳಿದಕ್ಕೆ ಸದ್ಯಕ್ಕೆ ಕೊಡಲು ಆಗುವುದಿಲ್ಲ ಅಂತ ಏರು ದನಿಯಲ್ಲೇ ಓನರ್ ಗೆ ಧಮ್ಕಿ ಹಾಕಿದ್ದಾರಂತೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ಶಿವಣ್ಣ ಕಂಪ್ಲೇಂಟ್ ಕೊಟ್ಟಿದ್ದಾರೆ.