Monday, May 20, 2024

ಗೌಡ್ರು ಸಂಪ್ರದಾಯಂತೆ ರಾಧಿಕಾ ಸೀಮಂತ

ನಟಿ ರಾಧಿಕಾ ಪಂಡಿತ್ ಅಮ್ಮನಾಗ್ತಿರೋ ಸಿಹಿ ಸುದ್ದಿ ಎಲ್ರಿಗೂ ಗೊತ್ತೇ ಇದೆ. ಇವತ್ತು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ನಡೆದಿದೆ.
ಗೌಡ್ರು ಸಂಪ್ರದಾಯದಂತೆ ರಾಧಿಕಾ ಅವ್ರ ಸೀಮಂತ ಶಾಸ್ತ್ರ ನಡೆದಿದೆ. ತಾಜ್ ವೆಸ್ಟ್ ಎಂಡ್ ಯಶ್ -ರಾಧಿಕಾ ಅವ್ರ ಫೇವರೇಟ್ ಪ್ಲೇಸ್. ಇಲ್ಲಿಯೇ ರಾಧಿಕಾ-ಯಶ್ ಮದ್ವೆ ಆಗಿತ್ತು. ಸೀಮಂತ ಶಾಸ್ತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಸುಮಾಲತಾ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ರಾಧಿಕಾ ಮತ್ತು ಯಶ್ 2017ರ ಡಿಸೆಂಬರ್ 9ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ರು.

RELATED ARTICLES

Related Articles

TRENDING ARTICLES