ತಮಿಳುನಾಡಿನ ಪ್ರಜ್ಞೇಶ್ ಗುಣೇಶ್ವರನ್ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನಾಲ್ಕನೇ ಶ್ರೇಯಾಂಕದ ಆಟಗಾರ ಪ್ರಜ್ಞೇಶ್ ಗುಣೇಶ್ವರನ್, ಬಿಗಿಯಾದ ಸರ್ವ್ ಹಾಗೂ ಮಿಂಚಿನ ಏಸ್ಗಳ ಮೂಲಕ ಅನುಭವಿ ಆಟಗಾರ ಸಾಕೇತ್ ಮೈನಾನಿಯನ್ನ ಪರಾಭವಗೊಳಿಸಿದ್ರು.
ಶನಿವಾರ ರಾತ್ರಿ ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಮೈದಾನದ ಸೆಂಟರ್ಕೋರ್ಟ್ನಲ್ಲಿ 57 ನಿಮಿಷಗಳ ಕಾಲ ಪೈನಲ್ ಹೋರಾಟ ನಡೆಯಿತು. ಈ ಅಂತಿಮ ಹಣಾಹಣಿಯಲ್ಲಿ ಚೆನ್ನೈನ ಆಟಗಾರ ಪ್ರಜ್ಞೇಶ್ 6-2, 6-2 ಸೆಟ್ಗಳಿಂದ ಸಾಕೇತ್ ವಿರುದ್ಧ ಜಯ ಸಾಧಿಸಿದ್ರು.
ವಿಜೇತ ಪ್ರಜ್ಞೇಶ್ ಗುಣೇಶ್ವರನ್ 15 ಲಕ್ಷ ರೂ. ಬಹುಮಾನ ಜಯಿಸಿದರೆ, ರನ್ನರ್ಅಪ್ ಸಾಕೇತ್ ಮೈನೇನಿ 9 ಲಕ್ಷ ರೂ. ಪಡೆದರು.
ಪ್ರಜ್ಞೇಶ್ ಗುಣೇಶ್ವರನ್ ಬೆಂಗಳೂರು ಓಪನ್ ಚಾಂಪಿಯನ್
TRENDING ARTICLES