ತಾಯಿಯೊಬ್ಬರು 2 ವರ್ಷದ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಮೈಸೂರಿನ ಎಚ್ .ಡಿ ಕೋಟೆ ತಾಲೂಕಿನ ಕುನ್ನೇಗಾಲದಲ್ಲಿ ನಡೆದಿದೆ. ರಾಜೇಶ್ವರಿ (23) ತನ್ನ ಮಗುವನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ತಾಯಿ. ಮಾನ್ವಿತ (2) ಮೃತ ಮಗು. ರಾಜೇಶ್ವರಿ ಕೂಡಗಿ ಗ್ರಾಮದ ಸೋಮಣ್ಣ ಅನ್ನೋರನ್ನು 6 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆ ಆಗಿದ್ದರು. ಆದ್ರೆ, ರಾಜೇಶ್ವರಿ ವಿನೋದ್ ಅನ್ನೋ ವ್ಯಕ್ತಿ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಮಗುವಿಗೆ ನೇಣು ಹಾಕಿ ಕೊಲೆಗೈದು ತಾನೂ ನೇಣಿಗೆ ಶರಣಾಗಿದ್ದಾರೆ ಅಂತ ಹೇಳಲಾಗಿದೆ. ಸರಗೂರು ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.