ಮಹಿಳಾ ಟಿ20 ವರ್ಲ್ಡ್ ಕಪ್ ನಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾದ ನಾಗಾಲೋಟ ಮುಂದುವರೆದಿದೆ.
ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರೋ ವರ್ಲ್ಡ್ ಕಪ್ ನಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರೋ ಭಾರತ ಆಸ್ಟ್ರೇಲಿಯಾ ವಿರುದ್ಧ ನಡೆದ ಔಪಚಾರಿಕ ಮ್ಯಾಚ್ ನಲ್ಲಿ 48 ರನ್ ಗಳ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಸ್ಮೃತಿ ಮಂದಣ್ಣ (83) ಮತ್ತು ಕ್ಯಾಪ್ಟನ್ ಕೌರ್ (48) ರನ್ ಗಳ ನೆರವಿನಿಂದ 167 ರನ್ ಗಳಿಸಿತು. ಗುರಿ ಬೆನ್ನತ್ತಿದ ಆಸೀಸ್ ಕೇವಲ 119 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ನವೆಂಬರ್ 23ಕ್ಕೆ ಸೆಮಿಫೈನಲ್ ನಡೆಯಲಿದೆ.