Tuesday, April 16, 2024

ಕಾಂಗ್ರೆಸ್ ಹೆಣ್ಮಕ್ಕಳು ಇನ್ಮುಂದೆ ಮೇಕಪ್ ಮಾಡಂಗಿಲ್ಲ..! ಇದು ಮೀಟೂ ಭಯನಾ..? ಶಿಸ್ತಿನ ಪಾಠನಾ..?

ಕಾಂಗ್ರೆಸ್ ಹೆಣ್ಮಕ್ಕಳು ಇನ್ಮುಂದೆ ಮುಖಕ್ಕೆ ಮೇಕಪ್ ಮಾಡಿಕೊಳ್ಳುವಂತಿಲ್ಲ, ತುಟಿಗೆ ಲಿಫ್ಟಿಕ್ ಹಚ್ಚಿಕೊಳ್ಳುವಂತಿಲ್ಲ, ಸ್ಕರ್ಟ್ ಗಿರ್ಟು ಹಾಕೋ ಆಗಿಲ್ಲ..!

ಇದು ಬೇರೆ ಯಾರೋ ಹೊರಡಿಸಿದ ಫರ್ಮಾನು ಅಲ್ಲ. ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವ್ರು ಹೊರಡಿಸಿದ ಕಟ್ಟಪ್ಪಣೆ…!

ಕಾಂಗ್ರೆಸ್ ಹೆಣ್ಮಕ್ಕಳು, ತುಟಿಗೆ ಲಿಫ್ಟಿಕ್ಕು,ಮುಖಕ್ಕೆ ಮೇಕಪ್ ಮಾಡ್ಕೋ ಬಾರ್ದು, ಉಡೋ ಸೀರೆ ಮೈ ಮುಚ್ಚಬೇಕು, ಹಾಕೋ ಬ್ಲೌವ್ಸ್ ಕುತ್ತಿಗೆ ಮುಚ್ಚಬೇಕು, ಸ್ಕರ್ಟ್ ಗಿರ್ಟು ಹಾಕೋ ಹಾಗಿಲ್ಲ.ಸ್ಲೀವ್ ಲೆಸ್ ಎಲ್ಲಾ ತೊಡೋ ಹಾಗಿಲ್ಲ, ಮೈತುಂಬ ಲಕ್ಷಣವಾಗಿ ಸೀರೆ ಉಟ್ಟು.ಕುತ್ತಿಗೆ ವರೆಗೆ ಮೈ ಮುಚ್ಚೋ ಬ್ಲೌಸ್ ಹಾಕ್ಬೇಕು ಅಂತ ಫರ್ಮಾನು ಹೊರಡಿಸಿದ್ದಾರೆ.

ಅವ್ರು ಏನು ಅಂತಾರೆ, ಇವ್ರೇನು ಅಂತಾರೆ, ಅವ್ರು ಹಾಗೆ ನೋಡ್ತಾರೆ. ಇವ್ರು ಹೀಗೆ ಟಚ್ ಮಾಡ್ತಾರೆ ಅನ್ನೋ ಬದಲು ನಮ್ಮ ಶಿಸ್ತಲ್ಲಿ ನಾವಿರೋಣ ಅಂತ ಡ್ರೆಸ್ ಕೋಡ್ ಬಗ್ಗೆ ಪಾಠ ಮಾಡಿದ್ದಾರೆ ಪುಷ್ಪಾ ಅಮರನಾಥ್.

ನವಂಬರ್ 19 ರಂದು ನಡೆಯಲಿರೋ ಪದಗ್ರಹಣ ಕಾರ್ಯಕ್ರಮಕ್ಕೆ ಎಲ್ಲಾ ಮಹಿಳಾ ಪದಾಧಿಕಾರಿಗಳು ನೀಲಿ ಸೀರೆ ಉಟ್ಟು ಮೈ ಮುಚ್ಚೋ ರೀತಿ ಬ್ಲೌಸ್ ತೊಟ್ಟು ಇದಕ್ಕೆ ಚಾಲನೆ ನೀಡೋಣ ಅಂತ ಹೇಳಿದ್ದಾರೆ. …ಇದು ಮೀಟು ಭಯಾನಾ….? ಇಲ್ಲಾ ಶಿಸ್ತಿನಾ ಪಾಠಾನಾ..? ಅಂತ ಪುಷ್ಪಾ ಅವ್ರೇ ಹೇಳ್ಬೇಕು..!

 

RELATED ARTICLES

Related Articles

TRENDING ARTICLES